ETV Bharat / state

ಇದೇ ಅವಕಾಶ ಬಳಸಿಕೊಂಡು ಕಾಂಗ್ರೆಸ್ ಜನರನ್ನು ಪ್ರಚೋದಿಸುತ್ತಿದೆ: ವಿ. ಶ್ರೀನಿವಾಸ್ ಪ್ರಸಾದ್

author img

By

Published : Dec 20, 2019, 4:31 PM IST

ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಹತಾಶೆಯಿಂದ ಜನರನ್ನು ಪ್ರಚೋದಿಸುತ್ತಿದೆ ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ.

v shrinivasa prasad
ಸಂಸದ ವಿ. ಶ್ರೀನಿವಾಸ್ ಪ್ರಸಾದ್

ಮೈಸೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಹತಾಶೆಯಿಂದ ಜನರನ್ನು ಪ್ರಚೋದಿಸುತ್ತಿದೆ ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಪೌರತ್ವ ಕಾಯ್ದೆಯಿಂದ ಭಾರತೀಯರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಕಾಯ್ದೆ ಬೇರೆಡೆಯಿಂದ ವಲಸೆ ಬಂದವರಿಗೆ ಮಾತ್ರ ಅನ್ವಯಿಸುತ್ತದೆ. ಕಾಂಗ್ರೆಸ್​ನವರು ಪೌರತ್ವವನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡು ಈ ರೀತಿಯ ಘಟನೆಗಳಿಗೆ ಕಾರಣರಾಗಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಜನರನ್ನು ಪ್ರಚೋದನೆ ಮಾಡುತ್ತಿದ್ದಾರೆ ಎನಿಸುತ್ತದೆ ಎಂದರು.

ನಾನು ಪೌರತ್ವ ಕಾಯ್ದೆಯ ಬಗ್ಗೆ ಸಂಸತ್​ನಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದೇನೆ. ಈ ಕಾಯ್ದೆ ಸಂಪೂರ್ಣವಾಗಿ ದೇಶದ ಹಿತದೃಷ್ಟಿಯಿಂದ ಒಳ್ಳೆಯದು. ಈ ವಿಚಾರವನ್ನು ದೇಶದ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು‌. ಅದನ್ನು ಬಿಟ್ಟು ಹಿಂಸಾತ್ಮಕ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಸಂಸದ ವಿ. ಶ್ರೀನಿವಾಸ್ ಪ್ರಸಾದ್

ಪಾಕಿಸ್ತಾನ ನಂಬರ್ 1 ಟೆರೆರಿಸ್ಟ್ ದೇಶ ಎಂದು ಜಗತ್ತಿಗೆ ಗೊತ್ತಿದೆ. ಆ ದೇಶದಿಂದ ನುಸುಳುವ ಉಗ್ರವಾದಿಗಳು ನಮ್ಮ ದೇಶದ ಕಾಶ್ಮೀರ ಹಾಗೂ ಬಾಂಬೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದಾರೆ. ಇದನ್ನು ಸರಿಯಾಗಿ ಭಾರತೀಯರು ಗಮನಿಸಿಬೇಕು ಎಂದರು.

Intro:ಮೈಸೂರು: ಪೌರತ್ವ ಕಾಯ್ದೆ ತಿದ್ದುಪಡಿ ಬಗ್ಗೆ ಕಾಂಗ್ರೆಸ್ ಅವರು ಹತಾಶೆಯಿಂದ,‌ ಈ ರೀತಿ ಮಾಡುತ್ತಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
Body:

ಇಂದು ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇದರಿಂದ ಬೇರೆ ಕಡೆಯಿಂದ ವಲಸೆ ಬಂದವರಿಗೆ ಮಾತ್ರ ಇದು ಅನ್ವಯಿಸುತ್ತದೆ. ಜಗತ್ತಿಗೆ ಪಾಕಿಸ್ತಾನದ ೧ ಟೆರೆರಿಸ್ಟ್ ದೇಶ ಎಂದು ಗೊತ್ತು, ಇದರಿಂದ ನಮ್ಮ ದೇಶದ ಕಾಶ್ಮೀರ ಹಾಗೂ ಬಾಂಬೆಯಲ್ಲಿ ಹಲವಾರು ವಿಧ್ವಂಸಕ ಕೃತ್ಯಗಳು ನಡೆಸಿದ್ದಾರೆ. ‌ಇದನ್ನು ಸರಿಯಾಗಿ ಭಾರತೀಯರು ಗಮನಿಸಿಬೇಕು.
ಕಾಂಗ್ರೆಸ್ ಅವರು ಪೌರತ್ವವನ್ನು ಬೇರೆ ರೀತಿ ಅರ್ಥೈಸಿ ಈ ರೀತಿ ಘಟನೆಗೆ ಕಾರಣರಾಗಿದ್ದಾರೆ. ಇದರಿಂದ ಗೊತ್ತಾಗಿದೆ.‌ ಕಾಂಗ್ರೆಸ್ ಅವರು ಹತಾಶೆಯ‌ ಭಾವನೆಯಿಂದ‌ ಈ ಅವಕಾಶವನ್ನು ಬಳಸಿಕೊಂಡು ಪ್ರಚೋದನೆ ಮಾಡುತ್ತಿದ್ದಾರೆ ಅನಿಸುತ್ತದೆ.
ನಾನು ಸಂಸದನಾಗಿ ಪೌರತ್ವ ಕಾಯ್ದೆಯ ಬಗ್ಗೆ ಸಂಸತ್ ನಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದೇನೆ. ಈ ಕಾಯ್ದೆ ಸಂಪೂರ್ಣವಾಗಿ ದೇಶದ ಹಿತ ದೃಷ್ಟಿಯಿಂದ ಒಳ್ಳೆಯದಿದೆ. ಇದನ್ನು ದೇಶದ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು‌ ಅದನ್ನು ಬಿಟ್ಟು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು.

ಇನ್ನೂ ವಿಶ್ವನಾಥ್ ಅವರು ಚುನಾವಣೆಯಲ್ಲಿ ಸೋತಿದ್ದರು ಅವರು ಅನುಭವಿ ರಾಜಕಾರಣಿ, ಅವರಿಗೆ ಭವಿಷ್ಯವಿದೆ ಎಂದ ಸಂಸದರು,
ಶಾಸಕರ ಜಿಟಿ ದೇವೇಗೌಡ ಇತ್ತೀಚೆಗೆ ತಮ್ಮ ಪಕ್ಷದ ಬಗ್ಗೆ ಹೇಳಿಕೆಯನ್ನು ನೀಡುತ್ತಿರುವುದು ಮತ್ತು ಒಬ್ಬ ಚುನಾಯಿತ ಪ್ರತಿನಿಧಿ‌ ಚುನಾವಣೆ ಸಮಯದಲ್ಲಿ ತಟಸ್ಥರಾಗಿರುವುದು ಸರಿಯಲ್ಲ, ಎಂದು ಸಂಸದರು ಜಿ.ಟಿ.ದೇವೇಗೌಡರ ಇತ್ತಿಚಿನ ನಡವಳಿಕೆಯ ಬಗ್ಗೆ ತಮ್ಮ‌ ಅಸಮಾಧಾನವನ್ನು ವ್ಯಕ್ತಪಡಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.