ETV Bharat / state

ಅಪರಾಧ ಪ್ರಕರಣಗಳ ಪತ್ತೆಗೆ ತಂತ್ರಜ್ಞಾನದಿಂದ ಬಹಳ ಉಪಯೋಗ: ಸಚಿವ ಬೊಮ್ಮಾಯಿ - home minister basavaraj bommai

ಇಂದಿನ ಅಪರಾಧದ ಪ್ರಕರಣಗಳಲ್ಲಿ ಬಹಳಷ್ಟು ತಂತ್ರಜ್ಞಾನ ಉಪಯೋಗವಾಗುತ್ತಿದೆ. ಇದರಿಂದಲೇ ಸೈಬರ್ ಕ್ರೈಂ, ಡ್ರಗ್ಸ್ ಪ್ರಕರಣಗಳೂ ಹೆಚ್ಚಾಗಿವೆ. ಹೀಗಾಗಿ ನೀವೆಲ್ಲರೂ ಕೂಡ ಆಧುನಿಕ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸರಿಗೆ ಕಿವಿ ಮಾತು ಹೇಳಿದರು.

Mysore
ಪ್ರಶಿಕ್ಷಾಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮ
author img

By

Published : Jul 14, 2021, 10:31 PM IST

ಮೈಸೂರು: ಸಾಧನೆ ಯಶಸ್ಸಿಗಿಂತ ಬಹಳ ದೊಡ್ಡದು. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವುದು ನಿಜವಾದ ಸಾಧನೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಹೀಗಾಗಿ ಆ ಸಾಧನೆಯತ್ತ ನಾವುಗಳು ದಾಪುಗಾಲು ಹಾಕಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಕರ್ನಾಟಕ ಪೊಲೀಸ್ ಆಕಾಡೆಮಿಯಲ್ಲಿ ನಡೆದ 35ನೇ ತಂಡದ ಪ್ರೊಬೇಷನರಿ ಪೊಲೀಸ್ ಉಪಾಧೀಕ್ಷಕರು ಹಾಗೂ ಅಬಕಾರಿ ಉಪಾಧೀಕ್ಷರು ಮತ್ತು 43ನೇ ತಂಡದ ಪ್ರೊಬೇಷನರಿ ಪೊಲೀಸ್ ಉಪನಿರೀಕ್ಷಕ ಪ್ರಶಿಕ್ಷಾಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Mysore
ಪ್ರಶಿಕ್ಷಾಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮ

ನ್ಯಾಯ ನಿಷ್ಠುರವಾಗಿ, ನ್ಯಾಯ ಪರವಾಗಿ ನಿಂತು ಕೆಲಸ ಮಾಡುವುದರ ಜತೆಗೆ ಅನ್ಯಾಯಕ್ಕೊಳಗಾದವರ ಹಾಗೂ ನ್ಯಾಯವಂಚಿತರ ಪರವಾಗಿ ಕೆಲಸ ಮಾಡಬೇಕು. ಇದಕ್ಕಾಗಿ ನೀವುಗಳು ತರಬೇತಿ ಪಡೆದುಕೊಂಡಿದ್ದಿರಿ. ಈ ತರಬೇತಿಯನ್ನು ಆಧುನಿಕ ಬದಲಾವಣೆಯಾಗುತ್ತಿರುವಂತಹ ಸವಾಲುಗಳ ತಕ್ಕಹಾಗೆ ತರಬೇತಿಯಲ್ಲಿ ಬದಲಾವಣೆಗಳನ್ನು ಮಾಡಬೇಕು ಎಂದು ಹೇಳಿದರು.

ಅಪರಾಧದ ಪ್ರಕರಣಗಳಲ್ಲಿ ತಂತ್ರಜ್ಞಾ ಸದುಪಯೋಗ:

ಇಂದಿನ ಅಪರಾಧದ ಪ್ರಕರಣಗಳಲ್ಲಿ ಬಹಳಷ್ಟು ತಂತ್ರಜ್ಞಾನ ಉಪಯೋಗವಾಗುತ್ತಿದೆ. ಇದರಿಂದಲೇ ಸೈಬರ್ ಕ್ರೈಂ, ಡ್ರಗ್ಸ್ ಪ್ರಕರಣಗಳೂ ಹೆಚ್ಚಾಗಿವೆ. ಹೀಗಾಗಿ ನೀವೆಲ್ಲರೂ ಕೂಡ ಆಧುನಿಕ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಗೆ ವಿಶೇಷವಾದ ಶಿಕ್ಷಣ ಪಡೆದವರು ಸೇರುತ್ತಿದ್ದಾರೆ. ಈ ರೀತಿಯ ಶಿಕ್ಷಣದ ಹಿನ್ನೆಲೆ ಇರುವುದಿಂದ ತಮ್ಮ ಕರ್ತವ್ಯದ ಜೊತೆಗೆ ತಂತ್ರಜ್ಞಾನದ ಬಳಕೆಯು ಸುಲಭವಾಗುತ್ತದೆ ಎಂಬ ವಿಶ್ವಾಸವಿದೆ‌ ಎಂದರು.

ಪೊಲೀಸರಿಗಾಗಿ 3 ಕಾರ್ಯಕ್ರಮ:

ಪೊಲೀಸರಿಗಾಗಿ ಪ್ರಮುಖವಾಗಿ 3 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅವುಗಳಲ್ಲಿ ಪ್ರಮುಖವಾದ ಪೊಲೀಸ್ ಹೌಸಿಂಗ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಶೀಘ್ರವಾಗಿ ಮುಗಿಸಲಿದ್ದೇವೆ. ಎರಡನೆಯದು ಆರೋಗ್ಯ ಭಾಗ್ಯ. ಈ ಯೋಜನೆಯಲ್ಲಿ ಬಹಳಷ್ಟು ಸಮಸ್ಯೆಗಳನ್ನು ನಿವಾರಿಸಿ ನಂತರ ಹೊಸ ಹೊಸ ಆಸ್ಪತ್ರೆಗಳನ್ನು ಜೋಡಿಸಲಾಗುವುದು. ಇದರ ಜೊತೆಗೆ ವಿದ್ಯಾನಿಧಿ 2ಎಂಬ ಯೋಜನೆಯನ್ನು ಆರಂಭ ಮಾಡಿ ಪೊಲೀಸರ ಮಕ್ಕಳಲಿಗೆ ವಿದ್ಯಾರ್ಥಿ ವೇತನ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನೀರಿಕ್ಷಕರಾದ ಪ್ರವೀಣ್ ಸೂದ್, ಪ್ರಭಾರ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಪಿ.ಹರೀಶೇಖರನ್, ಪೊಲೀಸ್ ಮಹಾ ನೀರಿಕ್ಷಕರು ಮತ್ತು ಆಕಾಡೆಮಿ ನಿರ್ದೇಶಕರಾದ ವಿಪುಲ್ ಕುಮಾರ್, ಉಪನಿರ್ದೇಶಕಿ ಸುಮನ್ ಡಿ.ಪನ್ನೇಕರ್ ಶಾಸಕರಾದ ರಾಮದಾಸ್, ಎಲ್.ನಾಗೇಂದ್ರ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸೇರಿದಂತೆ ಇತರರು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.