ETV Bharat / state

ಪೂರ್ಣಗೊಳ್ಳದ ದಶಪಥ ಹೆದ್ದಾರಿ ಪ್ರಧಾನಿ ಉದ್ಘಾಟಿಸುವುದು ಸರಿಯಲ್ಲ: ಡಾ ಎಚ್ ಸಿ ಮಹಾದೇವಪ್ಪ

ಯುಪಿಎ ಸರ್ಕಾರದ ಅವಧಿಯಲ್ಲೇ ಹೆದ್ದಾರಿಗೆ ಅನುಮೋದನೆ ಸಿಕ್ಕಿತ್ತು. ಆದರೆ ಅಷ್ಟೊತ್ತಿಗಾಗಲೇ ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತು ಎಂದು ಮಾಜಿ ಸಚಿವ ಹೆಚ್​ ಸಿ ಮಹದೇವಪ್ಪ ಹೇಳಿದ್ದಾರೆ. ಮತ್ತೊಂದು ಕಡೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಸಂಸದ ಪ್ರತಾಪ್​ ಸಿಂಹ

ongress leaders inspect Dashapath highway work
ದಶಪಥ ಹೆದ್ದಾರಿ ಕಾಮಗಾರಿ ವೀಕ್ಷಿಸಿದ ಕಾಂಗ್ರೆಸ್ ಮುಖಂಡರು
author img

By

Published : Mar 10, 2023, 10:02 PM IST

ಮೈಸೂರು: ಬೆಂಗಳೂರು - ಮೈಸೂರು ನಡುವಿನ ದಶಪಥ ಹೆದ್ದಾರಿ ಕಾಮಗಾರಿಯೂ ಇನ್ನೂ ಪೂರ್ಣವಾಗಿಲ್ಲ. ಅದರೂ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡುತ್ತಿರುವುದು ಸಮಂಜಸವಲ್ಲ ಎಂದು ಮಾಜಿ ಸಚಿವ ಎಚ್‌ ಸಿ ಮಹಾದೇವಪ್ಪ ಆರೋಪಿಸಿದರು.

ಸಿದ್ದಲಿಂಗಪುರ ಬಳಿ ಎಕ್ಸ್ಪ್ರೆಸ್ ಹೈವೇ ಪರಿಶೀಲನೆ ನಡೆಸಿ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾರ್ಚ್ 12 ರಂದು ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡುವರು. ಆದರೆ, 2013ರಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ನಾನು ಲೋಕೋಪಯೋಗಿ ಸಚಿವನಾಗಿದ್ದೆ. ಆಗ ಬೆಂಗಳೂರು - ಮೈಸೂರು ನಡುವೆ ರಸ್ತೆಯನ್ನು ದಶಪಥ ರಸ್ತೆಯನ್ನಾಗಿ ಮಾಡಬೇಕು ಎಂದು ಕೇಂದ್ರದ ಅಂದಿನ ಹೆದ್ದಾರಿ ಸಚಿವ ಆಸ್ಕರ್ ಪರ್ನಾಂಡಿಸ್ ಅವರಿಗೆ ರಾಜ್ಯದ ನಿಯೋಗದಿಂದ ಮನವಿ ಮಾಡಿದ್ದೆ ಎಂದು ತಿಳಿಸಿದರು. ಅದರಂತೆ 2014 ರ ಮಾರ್ಚ್​ ನಲ್ಲಿ ಗೆಜೆಟ್ ಪಾಸಾಗಿತ್ತು. ಅಷ್ಟೊತ್ತಿಗೆ ಕೇಂದ್ರದಲ್ಲಿ ಸರ್ಕಾರ ಬದಲಾಯಿತು. ಈ ಯೋಜನೆ ಕೈಗೊಳ್ಳಬೇಕೆಂದು ಕಾಂಗ್ರೆಸ್ ಸರ್ಕಾರದಲ್ಲಿ ನಿರ್ಧರಿಸಲಾಗಿತ್ತು ಎಂದು ಮಹಾದೇವಪ್ಪ ಹೇಳಿಕೆ ನೀಡಿದ್ದಾರೆ.

ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ: ಬೆಂಗಳೂರು - ಮೈಸೂರು ನಡುವಿನ 118 ಕಿಲೋ ಮೀಟರ್ ದೂರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೂ 22 ಕಿಲೋ ಮೀಟರ್ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಅಂಡರ್ ಪಾಸ್​​ಗಳು ಹಾಗೂ ಸರ್ವೀಸ್ ರಸ್ತೆಗಳ ಕಾಮಗಾರಿ ಸಂಪೂರ್ಣವಾಗಿ, ಅವೈಜ್ಞಾನಿಕವಾಗಿವೆ. ಅದರೂ ಸಂಸದ ಪ್ರತಾಪ್ ಸಿಂಹ ಬುದ್ಧಿವಂತಿಕೆಯಿಂದ ಮಾತಾನಾಡುತ್ತಿರುವುದು ಸರಿಯಲ್ಲ ಎಂದು ವ್ಯಂಗ್ಯವಾಡಿದರು. ಪೂರ್ಣಗೊಳ್ಳದಿರುವ ದಶಪಥ ಹೆದ್ದಾರಿ ಉದ್ಘಾಟನೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಬರುತ್ತಿರುವುದು, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜಕೀಯ ಗಿಮಿಕ್ಸ್ ಮಾಡುತ್ತಿದೆ ಎಂದು ಮಾಜಿ ಸಚಿವ ಮಹಾದೇವಪ್ಪ ಟೀಕಿಸಿದರು.

ಮಹಾದೇವಪ್ಪಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ ಸಂಸದ: ಮಾಜಿ ಕಾಂಗ್ರೆಸ್​ನ ಸಚಿವ ಡಾ. ಮಹಾದೇವಪ್ಪ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನ ಮಾಡುತ್ತೇನೆ. ಬೆಂಗಳೂರು- ಮೈಸೂರು ಹೈವೇ ಕೆಲಸಕ್ಕೆ ಕಾಂಗ್ರೆಸ್ ಒಂಬತ್ತುವರೇ ಪೈಸೆ ಸಹ ನೀಡಿಲ್ಲ. ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ 9,500 ಕೋಟಿ ನೀಡಿದೆ. ಈ ಕ್ರೆಡಿಟ್ ನಮಗೆ ಸೇರಬೇಕು. ಅಂದರೆ, ಹೆದ್ದಾರಿ ನಿರ್ಮಾಣದ ಶ್ರೇಯಸ್ಸು ನರೇಂದ್ರ ಮೋದಿ ಅವರಿಗೆ ಸಲ್ಲಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.

ಹೈವೇ ಕ್ರೆಡಿಟ್ ಬಿಜೆಪಿಗೆ ಸಲ್ಲಬೇಕು : ಬೆಂಗಳೂರು -ಮೈಸೂರು ನಡುವಿನ ಎಕ್ಸ್​ಪ್ರೆಸ್ ಹೈವೇ ಕಾಂಗ್ರೆಸ್ ಕಾಲದಲ್ಲಿ ಮಂಜೂರಾಗಿತ್ತು ಎಂಬ ಕಾಂಗ್ರೆಸ್ ಟೀಕೆಗೆ ಉತ್ತರಿಸಿದ ಸಂಸದ ಪ್ರತಾಪ್ ಸಿಂಹ, ಹೈವೇ ಕ್ರೆಡಿಟ್ ಅನ್ನು ಕಾಂಗ್ರೆಸ್ ತೆಗೆದುಕೊಳ್ಳಲು ಹೊರಟಿದೆ. ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ಹೈವೇ ಬಿಜೆಪಿ ಸರ್ಕಾರದ ನರೇಂದ್ರ ಮೋದಿಯವರಿಗೆ ಸಲ್ಲಬೇಕು. ಏಕೆಂದರೆ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು ನರೇಂದ್ರ ಮೋದಿ. ಇದಕ್ಕೆ ಉದ್ಘಾಟನೆ ಮಾಡಲು ಬರುತ್ತಿರುವವರು ನರೇಂದ್ರ ಮೋದಿಯವರೇ. ಇದರ ಕ್ರೆಡಿಟ್ ನಮಗೆ ಸಲ್ಲಬೇಕು ಎಂದು ಪ್ರತಿಪಾದಿಸಿದರು.

ಪ್ರಧಾನಿ 2 ಕಿಲೋ ಮೀಟರ್ ರೋಡ್ ಶೋ: ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 12 ರಂದು ಮೈಸೂರು - ಬೆಂಗಳೂರು ಎಕ್ಸ್​ಪ್ರೆಸ್ ಹೈವೇ ಉದ್ಘಾಟನೆಗೆ ಆಗಮಿಸುತ್ತಾರೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು, ಮೈಸೂರು ವಿಮಾನ ನಿಲ್ದಾಣದಿಂದ ಮಂಡ್ಯಗೆ ಹೆಲಿಕಾಪ್ಟರ್​ನಲ್ಲಿ ಆಗಮಿಸಿ, ಅಲ್ಲಿ 2 ಕಿಲೋ ಮೀಟರ್ ರೋಡ್ ಶೋ ಮಾಡುತ್ತಾರೆ. ನಂತರ ಹೆದ್ದಾರಿಯನ್ನು 50 ಮೀಟರ್​ನಷ್ಟು ನಡೆದುಕೊಂಡು ಬಂದು ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂಓದಿ:ಬಿಜೆಪಿಗೆ ಸೇರ್ತಿಲ್ಲ, ಆದರೆ ನನ್ನ ಸಂಪೂರ್ಣ ಬೆಂಬಲ ಬಿಜೆಪಿಗೆ: ಸುಮಲತಾ

etv play button

ETV Bharat Logo

Copyright © 2024 Ushodaya Enterprises Pvt. Ltd., All Rights Reserved.