ಮೈಸೂರು: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸ್ನೇಹಿತರಿಬ್ಬರು ನೀರುಪಾಲಾಗಿರುವ ಘಟನೆ, ಟಿ.ನರಸೀಪುರ ತಾಲೂಕಿನ ಯಡದೊರೆ ಗ್ರಾಮದ ಬಳಿ ನಡೆದಿದೆ.
ತುಮಕೂರು ಮೂಲದ ವಿನಯ್ (29), ಗಿರೀಶ್ (26) ಮೃತರು. ಇವರು ಹಬ್ಬದ ಹಿನ್ನೆಲೆ ಸ್ನೇಹಿತನ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಈಜಲು ಹೋಗಿದ್ದಾಗ ಕಾವೇರಿ ನದಿಯ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಆಗಮಿಸಿದ ಟಿ.ನರಸೀಪುರ ಪೊಲೀಸರು ಮೃತದೇಹಗಳನ್ನು ಹೊರತೆಗೆದು ತನಿಖೆ ಮುಂದುವರೆಸಿದ್ದಾರೆ.