ಮೈಸೂರು: ರೈಲ್ವೆ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಬೈಕ್ ಕಳ್ಳರನ್ನು ಹಾಸನ ರೈಲ್ವೆ ನಿಲ್ದಾಣದಲ್ಲಿ ಮೈಸೂರಿನ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಇತ್ತಿಚೆಗೆ ರೈಲ್ವೆ ನಿಲ್ದಾಣಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ಹಿನ್ನೆಲೆ ರೈಲ್ವೆ ಪೊಲೀಸ್ ಅಧೀಕ್ಷಕರು ಮೈಸೂರಿನ ರೈಲ್ವೆ ಪೊಲೀಸರ ವಿಶೇಷ ತಂಡವನ್ನು ರಚನೆ ಮಾಡಿದ್ದರು. ಈ ತಂಡ ಹಾಸನ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಚಿದಾನಂದ ಹಾಗೂ ಪ್ರಜ್ವಲ್ ಎಂಬುವರನ್ನು ಶುಕ್ರವಾರ ಬಂಧಿಸಿ, ವಿಚಾರಣೆಗೆ ಗುರಿಪಡಿಸಿದಾಗ ಹಾಸನ ರೈಲ್ವೆ ನಿಲ್ದಾಣದ ವಾಕಿಂಗ್ ಸ್ಥಳದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ.
ಇನ್ನು ವಿಚಾರಣೆ ಬಳಿಕ ಇವರು ಕಳ್ಳತನ ಮಾಡಿರುವ 1 ಲಕ್ಷ ಮೌಲ್ಯದ ನಾಲ್ಕು ಬೈಕ್ಗಳನ್ನು ಮೈಸೂರು ರೈಲ್ವೆ ಪೊಲೀಸರ ವಿಶೇಷ ತಂಡ ವಶಪಡಿಸಿಕೊಂಡಿದ್ದು, ವಿಚಾರಣೆ ಮುಂದುವರಿಸಿದೆ.