ETV Bharat / state

ಮೈಸೂರು: ಸೋಲಾರ್ ಪ್ಲಾಂಟ್​ನೊಳಗೆ ನುಗ್ಗಿದ್ದ ಎರಡು ಚಿರತೆ ಮರಿಗಳ ರಕ್ಷಣೆ

ಸೋಲಾರ್ ಪ್ಲಾಂಟ್​ ಆವರಣದೊಳಗೆ ನುಗ್ಗಿದ ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.

two-leopard-cubs-rescued-from-piriyapattana-solar-plant
ಸೋಲಾರ್ ಪ್ಲಾಂಟ್​ನೊಳಗೆ ಸಿಲುಕಿದ್ದ ಎರಡು ಚಿರತೆ ಮರಿಗಳ ರಕ್ಷಣೆ
author img

By

Published : Apr 3, 2022, 8:06 PM IST

ಮೈಸೂರು: ಸೋಲಾರ್ ಪ್ಲಾಂಟ್​ ಆವರಣದೊಳಗೆ ನುಗ್ಗಿದ್ದ ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಜೋಪಾನವಾಗಿ ಸೆರೆಹಿಡಿದಿರುವ ಘಟನೆ ಪಿರಿಯಾಪಟ್ಟಣದಲ್ಲಿ ಭಾನುವಾರ ನಡೆದಿದೆ. ತಾಲೂಕಿನ ಬೇಳಾಲು ಗ್ರಾಮದ ಸಮೀಪವಿರುವ ಅದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಪ್ಲಾಂಟ್​​ ಆವರಣದಲ್ಲಿ ಎರಡು ವರ್ಷ ಪ್ರಾಯದ ಎರಡು ಚಿರತೆ ಮರಿಗಳು ಸಿಲುಕಿದ್ದವು.

ಶನಿವಾರ ರಾತ್ರಿ ಪ್ಲಾಂಟ್​​ ಬಳಿ ಚಿರತೆ ಮರಿಗಳು ಕೂಗಾಡುತ್ತಿರುವುದನ್ನು ಗಮನಿಸಿ ಸೆಕ್ಯೂರಿಟಿ ಗಾರ್ಡ್ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

two-leopard-cubs-rescued-from-piriyapattana-solar-plant
ಚಿರತೆ ಮರಿ

ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆ ಮರಿಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಿ ರಕ್ಷಣೆ ಮಾಡಿದ್ದಾರೆ. ಬಳಿಕ ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗಿದ್ದಾರೆ. ಭಾನುವಾರ ಸೋಲಾರ್ ಪ್ಲಾಂಟ್​​ ನೌಕರರಿಗೆ ರಜೆ ಇದ್ದಿದ್ದರಿಂದ ಚಿರತೆ ಮರಿಗಳಿಂದ ಯಾವುದೇ ತೊಂದರೆ ಆಗಿಲ್ಲ.

ಇದನ್ನೂ ಓದಿ: ಅಪಘಾತದಲ್ಲಿ ನಿವೃತ್ತ ಎಎಸ್​ಐ ಸಾವು.. ಕಡಬದಲ್ಲಿ ನೀರುಪಾಲಾದ ಐಟಿಐ ವಿದ್ಯಾರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.