ETV Bharat / state

ಹುಣಸೂರಲ್ಲಿ ಕೆರೆ ಏರಿ ಮೇಲೆ ಸೆಲ್ಫಿ ತೆಗೆಯಲು ಹೋಗಿ ಸ್ನೇಹಿತರಿಬ್ಬರು ನೀರುಪಾಲು: ಓರ್ವ ಪಾರು - Two friends selfie death

ಕೆರೆ ಏರಿ ಮೇಲೆ ಸೆಲ್ಫಿ ತೆಗೆಯಲು ಹೋಗಿ ಆಯತಪ್ಪಿ ಸ್ನೇಹಿತರಿಬ್ಬರು ನೀರಿಗೆ ಬಿದ್ದು ಸಾವನ್ನಪ್ಪಿರುವ(Two friends selfie death) ದುರ್ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.

two students died when taking selfie
ಫೋಟೋ ತೆಗೆಸಿಕೊಳ್ಳಲು ಹೋಗಿ ನೀರು ಪಾಲು
author img

By

Published : Nov 22, 2021, 7:03 PM IST

ಮೈಸೂರು: ಸೆಲ್ಫಿ ತೆಗೆಯಲು ಕೆರೆ ಏರಿ ಮೇಲೆ ನಿಂತಿದ್ದ ಮೂವರು ಸ್ನೇಹಿತರಲ್ಲಿ ಇಬ್ಬರು ಸ್ನೇಹಿತರು ನೀರುಪಾಲಾಗಿರುವ(Two friends selfie death) ಘಟನೆ ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ.

ಕೆರೆ ಏರಿ ಮೇಲೆ ಸೆಲ್ಫಿ ತೆಗೆಯಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು

ಹುಣಸೂರು ತಾಲೂಕು ಹೊಸಕೋಟೆ ಬಳಿಯ ಕೆಂಚನ ಕೆರೆಯಲ್ಲಿ ಘಟನೆ ನಡೆದಿದ್ದು, ಅಬ್ದುಲ್ಲಾ (21) ಹಾಗೂ ತನ್ವೀರ್ (20) ಮೃತ ಸ್ನೇಹಿತರು. ಮೂವರು ಸ್ನೇಹಿತರು ಸೇರಿ ಸೆಲ್ಫಿ ತೆಗೆದುಕೊಳ್ಳಲು ಕೆಂಚನಕೆರೆ ಏರಿ ಮೇಲೆ ನಿಂತಿದ್ದು, ಈ ವೇಳೆ ಕಾಲುಜಾರಿ ಇಬ್ಬರು ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಸೆಲ್ಫಿ ತೆಗೆಯುತ್ತಿದ್ದ ಯುವಕ ಪಾರಾಗಿದ್ದಾನೆ.

two students died when taking selfie
ಸೆಲ್ಫಿ ಫೋಟೋ ತೆಗೆಸಿಕೊಳ್ಳಲು ಹೋಗಿ ನೀರು ಪಾಲು

ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹಗಳನ್ನು ಹುಣಸೂರು ಸರ್ಕಾರಿ ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದಾರೆ.‌

ಇದನ್ನೂ ಓದಿ:ವಿಡಿಯೋ ವೈರಲ್​: ಹಳಿ ಮೇಲೆ ವಿಡಿಯೋ ಮಾಡ್ತಿದ್ದಾಗ ಅವಘಡ.. ರೈಲಿಗೆ ಸಿಲುಕಿ ಯುವಕ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.