ಮೈಸೂರು: ಮದ್ಯಪಾನ ಮಾಡಿ ಬೈಕ್ ಚಲಾಯಿಸಿದ ಇಬ್ಬರು ದಾರಿ ಕಾಣದೆ ಮೋರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಮುತ್ತುರಾಯನ ಹೊಸಹಳ್ಳಿ ಬಳಿ ನಡೆದಿದೆ.
ಗಿರೀಶ್ (28), ಕುಂಟಯ್ಯ (26) ಮೃತರು. ಇಬ್ಬರು ಮೂಲತಃ ಹುಣಸೂರು ತಾಲೂಕಿನ ಮಂಗಳೂರು ಮಾಳ ಗ್ರಾಮದವರಾಗಿದ್ದು, ಬುಧವಾರ ಸಂಜೆ ಸಮೀಪದ ಪಂಚವಳಿ ಗ್ರಾಮಕ್ಕೆ ಹೋಗಿ ಬರುವುದಾಗಿ ಬೈಕ್ನಲ್ಲಿ ಹೋಗಿದ್ದರು. ಬಳಿಕ ಅಲ್ಲಿ ಮದ್ಯಪಾನ ಮಾಡಿ ವಾಪಸ್ ತಮ್ಮ ಗ್ರಾಮಕ್ಕೆ ಬರುವಾಗ ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿರುವ ಮುತ್ತುರಾಯನಹೊಸಹಳ್ಳಿ ಗ್ರಾಮದ ಬಳಿ ದಾರಿ ಕಾಣದೆ ಮೋರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಪೋಲಿಸರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು,ಇಬ್ಬರ ಮೃತದೇಹವನ್ನ ಹುಣಸೂರಿನ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.