ETV Bharat / state

ವಿದ್ಯುತ್ ತಗುಲಿ ಇಬ್ಬರು ದಿನಗೂಲಿ ಕೆಲಸಗಾರರು ಸಾವು - ವಿದ್ಯುತ್​ ತಂತಿ ಸ್ಪರ್ಶ ಇಬ್ಬರು ದಿನಗೂಲಿಗಳ ಸಾವು ಮೈಸೂರು

ವಿದ್ಯುತ್​ ಕಂಬ ತಗುಲಿ ದಿನಗೂಲಿ ಕೆಲಸರಿಬ್ಬರು ಮೃತಪಟ್ಟಿದ್ದಾರೆ. ಕ್ರಶರ್​ ಕಾರ್ಖಾನೆಗೆ ವಿದ್ಯುತ್​ ಕಂಬ ಅಳವಡಿಸುವಾಗ ಈ ಘಟನೆ ನಡೆದಿದೆ.

electroction incident in mysuru
ವಿದ್ಯುತ್ ತಗುಲಿ ಇಬ್ಬರು ದಿನಗೂಲಿ ಕೆಲಸಗಾರರು ಸಾವು
author img

By

Published : Jul 9, 2022, 6:17 PM IST

ಮೈಸೂರು: ವಿದ್ಯುತ್ ಕಂಬ ನೆಡುವಾಗ ವಿದ್ಯುತ್​ ತಂತಿ ತಗುಲಿ ಇಬ್ಬರು ದಿನಗೂಲಿ ಕೆಲಸಗಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲವಾಲ ಬಳಿ ನಡೆದಿದೆ. ಇಲವಾಲ ಹಾಗೂ ಶ್ರೀರಂಗಪಟ್ಟಣದ ಬೈ ಪಾಸ್ ರಸ್ತೆಯಲ್ಲಿರುವ ಕ್ರಶರ್ ಕಾರ್ಖಾನೆಗೆ ವಿದ್ಯುತ್ ಕಂಬ ನೆಡಲು ಉಮೇಶ್ ಮತ್ತು ಶಂಕರ್ ತೆರಳಿದ್ದರು. ವಿದ್ಯುತ್ ಕಂಬವನ್ನು ಕ್ರೈನ್ ಮೂಲಕ ಜೋಡಿಸಲಾಗುತ್ತಿತ್ತು ಈ ವೇಳೆ ಕಂಬವನ್ನ ಹಿಡಿದುಕೊಂಡಿದ್ದ ಇಬ್ಬರಿಗೆ ಮೇಲ್ಬಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿದ್ದು, ಕರೆಂಟ್​ ಹರಿದು ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.

ಇನ್ನೂ ಕುಟುಂಬಸ್ಥರು ರಸ್ತೆ ಮಧ್ಯೆ ಶವ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ. ಘಟನೆ ನಡೆದು ಸುಮಾರು ಗಂಟೆಯಾಗಿದ್ದರು ಸ್ಥಳಕ್ಕೆ ಕ್ರಶರ್ ಮಾಲೀಕರು ಆಗಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಇಬ್ಬರ ಸಾವಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಧಾರಾಕಾರ ಮಳೆ - ಮನೆ ಕುಸಿದು ವೃದ್ಧೆ ಸಾವು!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.