ಮೈಸೂರು : ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಟ್ರಿಣ್ ಟ್ರಿಣ್ ಪಬ್ಲಿಕ್ ಸೈಕಲ್ ಷೇರಿಂಗ್ ಯೋಜನೆಯಡಿ ಕಳೆದ ಆರು ವರ್ಷಗಳ ಹಿಂದೆ ಮೈಸೂರಿನಲ್ಲಿ ಪರಿಚಯ ಮಾಡಲಾಯಿತು. ಅಂದು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಈ ಸೈಕಲ್ ಯೋಜನೆಗೆ ಚಾಲನೆ ನೀಡಿದ್ದರು. ಮೈಸೂರು ನಗರದಲ್ಲಿ ಈ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇದೀಗಾ ಟ್ರಿಣ್ ಟ್ರಿಣ್ ಸೈಕಲ್ ಮತ್ತೇ ಹೊಸ ರೂಪದಲ್ಲಿ ರಸ್ತೆಗೆ ಇಳಿಯಲಿದ್ದು. ಈ ಸೈಕಲ್ ಗಳ ವಿಶೇಷತೆಗಳೇನು ಎಂಬ ಬಗ್ಗೆ ಒಂದು ವರದಿ ಇಲ್ಲಿದೆ.
ಈ ಟ್ರಿಣ್ ಟ್ರಿಣ್ ಸೈಕಲ್ ಆರಂಭದಲ್ಲಿ ಒಟ್ಟು 48 ನಿಲ್ದಾಣಗಳಲ್ಲಿ 450 ಹಳದಿ ಬಣ್ಣದ ಸೈಕಲ್ನೊಂದಿಗೆ ಟ್ರಿಣ್ ಟ್ರಿಣ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಈಗ ಹಸಿರು ಬಣ್ಣದ ಟ್ರಿಣ್ ಟ್ರಿಣ್ ಸೈಕಲ್ ಅನ್ನು ಜನರ ಸೇವೆಗೆ ಒದಗಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ಹಳೆಯ ಟ್ರಿಣ್ ಟ್ರಿಣ್ ಸೈಕಲ್ ಯೋಜನೆಗೆ ಆರು ವರ್ಷದ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಚಾಲನೆ ನೀಡಿದ್ದ ಸಿದ್ದರಾಮಯ್ಯ ಅವರು ಈಗ ಮತ್ತೆ ಮುಖ್ಯಮಂತ್ರಿ ಆಗಿದ್ದು. ಅವರಿಂದಲೇ ಹಸಿರು ಬಣ್ಣದ ಟ್ರಿಣ್ ಟ್ರಿಣ್ ಸೈಕಲ್ ಯೋಜನೆಗೆ ಚಾಲನೆ ನೀಡಿಸಲು ಪಾಲಿಕೆ ಪ್ರಯತ್ನ ಮಾಡುತ್ತಿದೆ ಎಂದು ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಈಟಿವಿ ಭಾರತ್ ಮಾಹಿತಿ ನೀಡಿದರು.
ನೂತನ ಟ್ರಿಣ್ ಟ್ರಿಣ್ ಸೈಕಲ್ಗಳ ವಿಶೇಷತೆ ಏನು : ಹಳೆಯ ಟ್ರಿಣ್ ಟ್ರಿಣ್ ಸೈಕಲ್ಗಳು ಹಳದಿ ಬಣ್ಣದಿಂದ ಕೂಡಿದ್ದು. ಈಗ ಅಳವಡಿಸಿರುವ ಟ್ರಿಣ್ ಟ್ರಿಣ್ ಸೈಕಲ್ಗಳು ಹಸಿರು ಬಣ್ಣದಿಂದ ಕೂಡಿವೆ. ಈ ಸೈಕಲ್ ಗಳು ಸ್ವಯಂ ಚಾಲಿತ ಸ್ಮಾರ್ಟ್ ಲಾಕ್ ವ್ಯವಸ್ಥೆ ಹೊಂದಿದ್ದು. ಗೂಗಲ್ ಪ್ಲೆ ಸ್ಟೋರ್ ನಲ್ಲಿ ಮೈಬೈಕ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು, ಈ ಹಸಿರು ಬಣ್ಣದ ಸೈಕಲ್ ಗಳನ್ನು ಉಪಯೋಗಿಸಬಹುದು. ಈ ಆ್ಯಪ್ ನಲ್ಲಿ ಸೈಕಲ್ ಸ್ಟಾಂಡ್ ಗಳು ಎಲ್ಲೆಲ್ಲಿವೆ ಎಂಬ ಮಾಹಿತಿ ಇರಲಿದ್ದು. ಈಗಾಗಲೇ ಹಳೆಯ ಟ್ರಿಣ್ ಟ್ರಿಣ್ ಯೋಜನೆಗೆ ಶುಲ್ಕ ನೀಡಿ. ಹೆಸರು ನೊಂದಾಯಿಸಿರುವವರು, ಈಗ ಮತ್ತೆ ಹೆಸರನ್ನು ನೊಂದಾಯಿಸಿಕೊಳ್ಳುವ ಅವಶ್ಯಕತೆ ಇಲ್ಲ. ಹಳೆಯ ಹೆಸರಿನಲ್ಲಿಯೇ ಹೊಸ ಮಾದರಿಯ ಸೈಕಲ್ ಗಳನ್ನು ಬಳಸಬಹುದಾಗಿದೆ.
ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಪಾಲಿಕೆ ಸದ್ಯದಲ್ಲಿಯೇ ತಿಳಿಸಲಿದೆ ಎಂದು ಡಾ.ಲಕ್ಷ್ಮಿ ಕಾಂತ ರೆಡ್ಡಿ ಮಾಹಿತಿ ನೀಡಿದ್ದು, ಸದ್ಯ ಹಳೆಯ ಸೈಕಲ್ ಗಳಿಗೆ 48ನಿಲ್ದಾಣಗಳಲ್ಲಿ 458 ಬೈಸಿಕಲ್ ಗಳಿದ್ದು, ಇದನ್ನು ಈಗ 100 ಸೈಕಲ್ ನಿಲ್ದಾಣಗಳಿಗೆ ವಿಸ್ತರಣೆ ಮಾಡಿ, ಸಾವಿರ ಸೈಕಲ್ ಗಳನ್ನು ಒದಗಿಸಲಾಗಿದೆ. ಶೀಘ್ರವೇ ಸ್ಥಳೀಯ ಶಾಸಕರು ಹಾಗೂ ಮುಖ್ಯಮಂತ್ರಿಯವರ ಸಮಯಾವಕಾಶ ಸಿಕ್ಕ ಬಳಿಕ, ಹಸಿರು ಬಣ್ಣದ ಟ್ರಿಣ್ ಟ್ರಿಣ್ ಸೈಕಲ್ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತರು ಮಾಹಿತಿ ನೀಡಿದರು.
ಇದನ್ನೂ ಓದಿ : ಮೈಸೂರು: ಅಂಗನವಾಡಿ ಕಾರ್ಯಕರ್ತೆಯ ಹತ್ಯೆ, ಆರೋಪಿ ಬಂಧನ