ETV Bharat / state

ಸಾರಿಗೆ ನೌಕರರ ಮುಷ್ಕರದ ಬಿಸಿ: ಪ್ರಯಾಣಿಕರಿಗೆ ಖಾಸಗಿ ಬಸ್​ಗಳಿಂದ ಬರೆ - mysore private buses news

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಮೈಸೂರಿನ ಗ್ರಾಮಾಂತರ ನಗರ ಹಾಗೂ ಎಲ್ಲಾ ತಾಲ್ಲೂಕುಗಳ ಬಸ್ ನಿಲ್ದಾಣಗಳಲ್ಲಿ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಖಾಸಗಿ ಬಸ್​ಗಳು ಸಾರಿಗೆ ಬಸ್ ನಿಲ್ದಾಣದ ಮುಂಭಾಗವೇ ಬಂದು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಮುಗಿಬಿದ್ದಿವೆ.

mysore
ಖಾಸಗಿ ಬಸ್​
author img

By

Published : Dec 12, 2020, 12:11 PM IST

ಮೈಸೂರು: ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿರುವುದರಿಂದ ಖಾಸಗಿ ಬಸ್​ನವರಿಗೆ ಹಬ್ಬವಾಗಿದೆ.

ಮೈಸೂರಿನ ಗ್ರಾಮಾಂತರ ನಗರ ಹಾಗೂ ಎಲ್ಲಾ ತಾಲ್ಲೂಕುಗಳ ಬಸ್ ನಿಲ್ದಾಣಗಳಲ್ಲಿ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ, ಖಾಸಗಿ ಬಸ್​ಗಳು ಸಾರಿಗೆ ಬಸ್ ನಿಲ್ದಾಣದ ಮುಂಭಾಗವೇ ಬಂದು ಪ್ರಯಾಣಿಕರನ್ನು ಬೇರೆ ಬೇರೆ ಊರಿಗೆ ಕರೆದುಕೊಂಡು ಹೋಗಲು ಮುಗಿಬಿದ್ದಿವೆ.

ಓದಿ: ಖಾಸಗಿ ಚಾಲಕ, ನಿರ್ವಾಹಕರಿಂದ ಬಸ್ ಸಂಚಾರಕ್ಕೆ ಮುಂದಾದ ಬಿಎಂಟಿಸಿ..ಸಾರಿಗೆ ನೌಕರರ ಆಕ್ರೋಶ

ದುಪ್ಪಟ್ಟು ಹಣವನ್ನು ಖಾಸಗಿ ಬಸ್​ಗಳು ನಿಗದಿ ಮಾಡಿರುವುದರಿಂದ ಕೆಲ ಪ್ರಯಾಣಿಕರು ಊರು ತಲುಪಿದರೆ ಸಾಕು ಎಂದು ಬಸ್ ಏರಿದರೆ, ಕೆಲವರು ಇಷ್ಟೊಂದು ಹಣ ಕೊಟ್ಟು ನಾವ್ಯಾಕೆ ಹೋಗಬೇಕು? ಎಂದು ರೈಲ್ವೆ ನಿಲ್ದಾಣದ ಕಡೆ ಮುಖ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.