ETV Bharat / state

ಮೈಸೂರು ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 56 ನಾಮಪತ್ರ ಸಲ್ಲಿಕೆ

ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಿಂದ ಇಂದು ಒಟ್ಟು 56 ನಾಮಪತ್ರಗಳು ಸಲ್ಲಿಕೆಯಾಗಿವೆ.

author img

By

Published : Apr 19, 2023, 9:35 PM IST

total-56-nominations-filed-in-11-constituencies-of-mysore
ಮೈಸೂರು ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 56 ನಾಮಪತ್ರ ಸಲ್ಲಿಕೆ

ಮೈಸೂರು : ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ 56 ನಾಮಪತ್ರಗಳು ಸಲ್ಲಿಕೆಯಾಗಿವೆ. ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಬಹುಜನ ಸಮಾಜವಾದಿ ಪಕ್ಷದಿಂದ ಪ್ರದೀಪ್.ಎಸ್, ಪಕ್ಷೇತರ ಅಭ್ಯರ್ಥಿಗಳಾಗಿ ಕೃಷ್ಣಕುಮಾರ್ ಹೆಚ್.ಜೆ. ಹಾಗೂ ಶ್ರೀನಿವಾಸ್ ಪಿ. ಎಂಬವರು ನಾಮಪತ್ರ ಸಲ್ಲಿಸಿದರು.

ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಮುರುಗೇಶ್, ಕಾಂಗ್ರೆಸ್ ಪಕ್ಷದಿಂದ ರವಿಶಂಕರ್ ಡಿ, ಪಕ್ಷೇತರ ಅಭ್ಯರ್ಥಿಯಾಗಿ ಶಿವನಂಜಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಹುಣಸೂರು ವಿಧಾನ ಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಜಿ. ರವಿಶಂಕರ್, ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಪ್ರಸನ್ನ ಕುಮಾರ್, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಸುನೀಲ್ ಡಿ.ಎನ್, ಪಕ್ಷೇತರ ಅಭ್ಯರ್ಥಿಗಳಾಗಿ ಚನ್ನೇಗೌಡ, ಲೋಕೇಶ್ ಬಿ. ಎಲ್ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಹೆಚ್.ಡಿ ಕೋಟೆ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕೆ.ಎಂ. ಕೃಷ್ಣ, ಪಕ್ಷೇತರ ಅಭ್ಯರ್ಥಿಯಾಗಿ ಜಿ. ಎನ್ ದೇವದತ್ತ ಅವರು ನಾಮಪತ್ರ ಸಲ್ಲಿಸಿದ್ದಾರೆ. ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಮಹಾದೇವನ್ ಆರ್, ಪಕ್ಷೇತರ ಅಭ್ಯರ್ಥಿಯಾಗಿ ಆನಂದ ಜಿ. ಅವರು ನಾಮ ಪತ್ರ ಸಲ್ಲಿಸಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಾರ್ಟಿಯ ಅಭ್ಯರ್ಥಿ ಎಸ್. ಹರೀಶ್, ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ)ಯಿಂದ ಶಿವಣ್ಣ ಬಿ, ಪಕ್ಷೇತರ ಅಭ್ಯರ್ಥಿಗಳಾಗಿ ಬಿ. ಪ್ರಕಾಶ್​, ಎಂ. ನಾಗರಾಜು, ಎಂ. ರಂಗಸ್ವಾಮಿ, ಶ್ರೀನಿವಾಸ, ಶ್ರೀನಿವಾಸ ಎಂ, ಜಿ. ಎಂ ಮಹದೇವ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜಯಶ್ರೀ ವೈ, ಕಾಂಗ್ರೆಸ್​​ನಿಂದ ಎಂ.ಕೆ ಸೋಮಶೇಖರ್, ಪಕ್ಷೇತರ ಅಭ್ಯರ್ಥಿಗಳಾಗಿ ಎಸ್. ಪ್ರಕಾಶ ಪ್ರಿಯ ದರ್ಶನ್, ಉದಯಶಂಕರ್ ಹೆಚ್. ಪಿ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಪಕ್ಷದಿಂದ ಕೆ. ಹರೀಶ್ ಗೌಡ, ಪಕ್ಷೇತರ ಅಭ್ಯರ್ಥಿಯಾಗಿ ಸಿದ್ಧರಾಜು ಹೆಚ್.ಡಿ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.

ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಆಲ್ ಇಂಡಿಯಾ ಮಹಿಳಾ ಎಂಪವರ್​ಮೆಂಟ್​​ ಪಾರ್ಟಿಯಿಂದ ಖಲೀಲ್ ಉರ್ ರಹಮಾನ್ ಷರೀಫ್​, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಅಬ್ದುಲ್ ಮಜೀದ್ ಕೆ.ಹೆಚ್, ಕಾಂಗ್ರೆಸ್​ನಿಂದ ತನ್ವೀರ್ ಸೇಠ್, ಆಮ್ ಆದ್ಮಿ ಪಾರ್ಟಿಯಿಂದ ಲಕ್ಷ್ಮೀಕಾಂತ್ ತಿವಾರಿ, ಪಕ್ಷೇತರ ಅಭ್ಯರ್ಥಿಗಳಾಗಿ ರಿಹಾನ ಬಾನು, ಲಿಂಗರಾಜ್ ಎಂ, ಜಿ.ಬಿ ಶಿವಣ್ಣ, ನೀಲಕಂಠ ಎಂ.ಎಸ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.

ವರುಣಾ ವಿಧಾನಸಭಾ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮಹದೇವಸ್ವಾಮಿ ಆರ್., ಕಾಂಗ್ರೆಸ್​ನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಪಕ್ಷೇತರ ಅಭ್ಯರ್ಥಿಗಳಾಗಿ ಖಲೀಮ್ ಉಲ್ಲಾ ಮತ್ತು ವಿ.ಪಿ ಸುಶೀಲ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಟಿ. ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಇಂಡಿಯನ್ ಮೂಮೆಂಟ್ ಪಾರ್ಟಿಯಿಂದ ಶ್ರೀನಿವಾಸ್, ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ) ಅಭ್ಯರ್ಥಿ ಎ.ಎನ್ ಶಿವಲಿಂಗಪ್ಪ, ಬಹುಜನ ಸಮಾಜ ಪಾರ್ಟಿಯಿಂದ ಬಿ.ಆರ್ ಪುಟ್ಟಸ್ವಾಮಿ, ಪಕ್ಷೇತರ ಅಭ್ಯರ್ಥಿಗಳಾಗಿ ಮಹದೇವ ಡಿ., ಎಂ. ಕುಮಾರ ಕ್ರಾಂತಿ ಎಂಬವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಕೆ.ವಿ.ರಾಜೇಂದ್ರ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಪಕ್ಷೇತರ ಅಭ್ಯರ್ಥಿಯಾಗಿ ನೇಕಾರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀ ನಾಮಪತ್ರ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.