ಮೈಸೂರು : ಮೈಸೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿಯಾದ್ರೆ, 32 ಮಂದಿ ಒಂದೇ ದಿನ ಡಿಸ್ಚಾರ್ಜ್ ಆಗಿದ್ದಾರೆ. 70 ವರ್ಷದ ವೃದ್ಧ(ರೋಗಿ ಸಂಖ್ಯೆ 11942) ಮೃತಪಟ್ಟಿದ್ದಾರೆ. ಮೃತರನ್ನು ಆರೋಗ್ಯ ಇಲಾಖೆಯ ಮಾರ್ಗದರ್ಶನದಂತೆ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಸಂಪರ್ಕಿತರಿಂದ ನಾಲ್ವರಿಗೆ, ಸಾರಿ ಪ್ರಕರಣ ನಾಲ್ಕು, ಐಎಲ್ಐ ಪ್ರಕರಣ 4, ಕಂಟೇನ್ಮೆಂಟ್ ಝೋನ್ನಿಂದ ಒಂದು, ಅಸಿಂಪ್ಟಮೆಟಿಕ್ 2 ಪ್ರಕರಣ, ಓರ್ವ ಗರ್ಭಿಣಿಗೆ, ಅಂತರ ಜಿಲ್ಲೆಯಿಂದ ಆಗಮಿಸಿದ ಇಬ್ಬರಿಗೆ ಸೇರಿ 18 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಮೈಸೂರಿನಲ್ಲಿ ಭಾನುವಾರ 18 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 255ಕ್ಕೇರಿದೆ. 164 ಮಂದಿ ಈವರೆಗೆ ಡಿಸ್ಚಾರ್ಜ್ ಆಗಿದ್ದಾರೆ. 89 ಒಟ್ಟಾರೆ ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.