ಮೈಸೂರು: 11 ಮಂದಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ 52 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ಹೇಲ್ತ್ ಕೇರ್ ಸಿಬ್ಬಂದಿ, ಅಂತರ್ ರಾಜ್ಯದಿಂದ ಆಗಮಿಸಿದ ನಾಲ್ವರು, ಸೋಂಕಿತರ ಸಂಪರ್ಕಿತರಿಂದ 11 ಮಂದಿ, ಅಂತರ್ ಜಿಲ್ಲೆಯಿಂದ ಬಂದ ಮೂವರು, ಐಎಲ್ಐನಿಂದ 9, ಎಸ್ಎಆರ್ಐನಿಂದ 12, ಇಬ್ಬರು ಗರ್ಭಿಣಿಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು ಗುಣಮುಖರಾದ 14 ಮಂದಿಯನ್ನು ಡಿಸ್ಚಾರ್ಜ್ ಮಾಡಿ ಕಳುಹಿಸಲಾಗಿದೆ.
25,334 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 24,692 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟಾರೆ ಮೈಸೂರಿನಲ್ಲಿ 641 ಕೊರೊನಾ ಸೋಂಕಿತರ ಪೈಕಿ 336 ಮಂದಿ ಡಿಸ್ಚಾರ್ಜ್ ಆಗಿದ್ದು, 289 ಮಂದಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 34 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.