ETV Bharat / state

ಸಂಸತ್ತಿನ ಮುಂದೆ ಟಿಪ್ಪು ಸುಲ್ತಾನ್ ಪ್ರತಿಮೆ ನಿಲ್ಲಿಸಬೇಕು: ವಾಟಾಳ್ ನಾಗರಾಜ್ ಒತ್ತಾಯ - ಮೋದ್ ಮುತಾಲಿಕ್

ಟಿಪ್ಪುವಿನ ಇತಿಹಾಸ ತಿಳಿಯಬೇಕಾದರೆ ಕನ್ನಂಬಾಡಿ ಕಟ್ಟೆಯ ಪಕ್ಕದಲ್ಲಿ ಕನ್ನಡದಲ್ಲಿ ಒಂದು ವಾಕ್ಯ ಬರೆದಿದೆ, ಅದನ್ನು ಓದಿ ಬಿಜೆಪಿ ಮತ್ತು ಆರ್​ಎಸ್​ಎಸ್​ನವರು ಅರ್ಥ ಮಾಡಿಕೊಳ್ಳಲಿ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

tipu-sultan-statue-should-be-installed-in-front-of-parliament-says-vatal-nagaraj
ಸಂಸತ್ತಿನ ಮುಂದೆ ಟಿಪ್ಪು ಸುಲ್ತಾನ್ ಪ್ರತಿಮೆ ನಿಲ್ಲಿಸಬೇಕು: ವಾಟಾಳ್ ನಾಗರಾಜ್
author img

By

Published : Nov 13, 2022, 4:39 PM IST

Updated : Nov 13, 2022, 4:59 PM IST

ಮೈಸೂರು: ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವುದು ಸಂತೋಷ. ಅದೇ ರೀತಿಯಾಗಿ ಸಂಸತ್ತಿನ ಮುಂದೆ ಟಿಪ್ಪು ಸುಲ್ತಾನ್​ ಪ್ರತಿಮೆ ನಿಲ್ಲಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ರೈಲಿಗೆ ಟಿಪ್ಪು ಹೆಸರು ಮರು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ನಗರದ ಹಾರ್ಡಿಂಗ್ ವೃತ್ತದ ಬಳಿ ಏಕಾಂಗಿಯಾಗಿ ಪ್ರತಿಭಟಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಮೊದಲ ಬಾರಿಗೆ ಟಿಪ್ಪು ಸುಲ್ತಾನ್ ಜಯಂತಿ ಮಾಡಿದವರೇ ನಾವು. ಟಿಪ್ಪುವಿನ ಇತಿಹಾಸವನ್ನು ತಿರುಚುವ ಕೆಲಸವನ್ನು ಬಿಜೆಪಿ ಮತ್ತು ಆರ್​ಎಸ್​ಎಸ್​ನವರು ಮಾಡುತ್ತಿದ್ದಾರೆ. ಟಿಪ್ಪುವಿನ ಇತಿಹಾಸ ತಿಳಿಯಬೇಕಾದರೆ ಕನ್ನಂಬಾಡಿ ಕಟ್ಟೆಯ ಪಕ್ಕದಲ್ಲಿ ಕನ್ನಡದಲ್ಲಿ ಒಂದು ವಾಕ್ಯ ಬರೆದಿದೆ. ಅದನ್ನು ಓದಿ ಬಿಜೆಪಿ ಮತ್ತು ಆರ್​ಎಸ್​ಎಸ್​ನವರು ಅರ್ಥ ಮಾಡಿಕೊಳ್ಳಲಿ ಎಂದರು.

ಸಂಸತ್ತಿನ ಮುಂದೆ ಟಿಪ್ಪು ಸುಲ್ತಾನ್ ಪ್ರತಿಮೆ ನಿಲ್ಲಿಸಬೇಕು: ವಾಟಾಳ್ ನಾಗರಾಜ್ ಒತ್ತಾಯ

ಟಿಪ್ಪುವಿನ ಐದು ಅಡಿ ಪ್ರತಿಮೆ ಮಾಡಲು ಬಿಡುವುದಿಲ್ಲ ಎಂದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆಗೆ ತಿರುಗೇಟು ನೀಡಿದ ವಾಟಾಳ್ ನಾಗರಾಜ್, ಪ್ರಮೋದ್ ಮುತಾಲಿಕ್ ಒಬ್ಬ ಹುಚ್ಚ. ಅವನ ಮಾತನ್ನು ಕೇಳುತ್ತಿದ್ದರೆ ನಮಗೂ ಹುಚ್ಚು ಹಿಡಿಯುತ್ತದೆ. ಪ್ರಮೋದ್ ಮುತಾಲಿಕ್ ಇದೇ ರೀತಿ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಣೆ ಮಾಡಬಾರದು ಎಂದು ಹೇಳಿ ನನಗೆ ಕರೆ ಮಾಡಿದ್ದ. ನಿನಗೂ ಸಂಸಾರ ಮಕ್ಕಳು ಅಂತ ಇದ್ದಿದ್ರೆ ಅದರ ಸಂಬಂಧ, ಬೆಲೆ ಗೊತ್ತಾಗುತ್ತಿತ್ತು ಎಂದು ಬೈದಿದ್ದೆ ಎಂದು ಏಕವನಚನದಲ್ಲೇ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಕೆಂಪೇಗೌಡ ಪ್ರತಿಮೆ ಅನಾವರಣ ವಿಷಯದಲ್ಲಿ ರಾಜ್ಯ ಸರ್ಕಾರ ವಿರೋಧ ಪಕ್ಷದವರು ಮತ್ತು ಮಾಜಿ ಪ್ರಧಾನಿ ಹೆಚ್ ​ಡಿ ದೇವೇಗೌಡರನ್ನು ಕಡೆಗಣಿಸಿದ್ದಕ್ಕೆ ವಿಷಾದಿಸುತ್ತೇನೆ. ವಿರೋಧಪಕ್ಷದವರೂ ಸರ್ಕಾರದ ಒಂದು ಭಾಗ. ಅವರನ್ನೂ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆಯಬೇಕಾಗಿತ್ತು. ಕರೆಯದೇ ಇದ್ದದ್ದು ಒಳ್ಳೆಯ ಸಂಸ್ಕೃತಿ ಅಲ್ಲ ಎಂದು ಟೀಕಿಸಿದರು.

ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ, ಕನಕದಾಸ, ವಾಲ್ಮೀಕಿ ಪ್ರತಿಮೆಗೂ ಪೂಜೆ ಸಲ್ಲಿಸಿ ನಮಸ್ಕರಿಸಿದ್ದರು. ಆದರೆ ಸಂಗೊಳ್ಳಿ ರಾಯಣ್ಣ ಮತ್ತು ಬಸವಣ್ಣನವರಿಗೆ ಕನಿಷ್ಠ ಪಕ್ಷ ನಮಸ್ಕರಿಸುವುದು, ಪೂಜೆ ಮಾಡುವುದು ಯಾಕೆ ಮೋದಿ ಅವರಿಗೆ ನೆನಪಾಗಲಿಲ್ಲ ಎಂದು ವಾಟಾಳ್​ ಪ್ರಶ್ನಿಸಿದರು.

ಇದನ್ನೂ ಓದಿ: ಟಿಪ್ಪು ಸುಲ್ತಾನ್‌ ಪ್ರತಿಮೆ ನಿರ್ಮಿಸಿದ್ರೆ ಒಡೆದು ಹಾಕುತ್ತೇವೆ: ಪ್ರಮೋದ್‌ ಮುತಾಲಿಕ್‌

Last Updated : Nov 13, 2022, 4:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.