ಮೈಸೂರು : ನಾಗರಹೊಳೆಯಲ್ಲಿ ಜೀವಜಲಕ್ಕಾಗಿ ಮರಿಗಳೊಂದಿಗೆ ಹುಡುಕಾಟ ನಡೆಸಿದ ಹೆಣ್ಣಹುಲಿಯೊಂದು ಕೊನೆಗೂ ಬಾಯಾರಿಕೆ ನೀಗಿಸಿಕೊಂಡು ಕ್ಯಾಮೆರಾಗಳಿಗೆ ಬೇಸಿಗೆ ದರ್ಶನ ಮಾಡಿಸಿದೆ.
ರಾಜೀವ್ ಗಾಂಧಿ(ನಾಗರಹೊಳೆ) ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ದಮ್ಮನಕಟ್ಟೆ ವಲಯದಿಂದ ಸಫಾರಿ ಹೊರಟ ಪ್ರವಾಸಿಗರಿಗೆ, ಹುಲಿ ತನ್ನ ಪುಟ್ಟ ಮೂರು ಕಂದಮ್ಮಗಳ ಜೊತೆ ನೀರಿಗಾಗಿ ಆಗಮಿಸಿದ ದೃಶ್ಯ ಕಂಡು ಬಂತು. ನೀರು ಸಿಕ್ಕಿದ ಕೂಡಲೇ ದಾಹ ನೀಗಿಸಿಕೊಂಡು ಕಾಡಿನಲ್ಲಿರುವ ಕೆರೆಗಳನ್ನು ತುಂಬಿಸಿ ಎಂದು ತನ್ನ ಹಾವಭಾವದ ಮೂಲಕ ಸಂದೇಶ ರವಾನಿಸಿದಂತಾ ಸನ್ನಿವೇಶ ಕ್ಯಾಮರಾಮದಲ್ಲಿ ಸೆರೆಯಾಗಿದೆ.
ಈಗಾಗಲೇ ಬೇಸಿಗೆಯಿಂದಾಗಿ ಭೂಮಿ ಸುಡುತ್ತಿದ್ದು, ಮೈಸೂರಿನಲ್ಲಿ ತಾಪಮಾನ ಹೆಚ್ಚಾಗಿದೆ. ಮನುಷ್ಯರು ಎಳೆ ನೀರು, ತಂಪು ಪಾನೀಯಗಳ ಮೊರೆ ಹೋಗುವ ಮೂಲಕ ಬಿಸಿಲಿನ ತಾಪದಿಂದ ಕೊಂಚ ದೂರವಿದ್ದಾರೆ.
ಬೇಸಿಗೆ ಆರಂಭವಾಗುತ್ತಿದ್ದಂತೆ ಕಾಡಿನ ಮಧ್ಯದಲ್ಲಿರುವ ಕೆರೆಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ನೀರು ತುಂಬಿಸಿದರೆ ನೀರಿನ ಹಾಹಾಕಾರ ನಮಗೂ ನೀಗಲಿದೆ ಎಂದು ಹುಲಿ ತನ್ನ ಮರಿಗಳ ಮೂಲಕ ಸಂದೇಶ ಸಾರಿದೆ.