ETV Bharat / state

ಸಿಸಿಬಿ ಪೊಲೀಸರ ಭರ್ಜರಿ ಬೇಟೆ: ಮೂವರ ಬಂಧನ, 31ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ - mysore

ನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಮೂವರು ಮನೆಗಳ್ಳರನ್ನ ಬಂಧಿಸಿದ್ದಾರೆ. ಬಂಧಿತರಿಂದ 31 ಲಕ್ಷ ರೂ. ಮೌಲ್ಯದ, 611 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದಾರೆ.

Three  thieves  arrested In mysore
ಮೂವರು ಮನೆಗಳ್ಳರ ಬಂಧನ
author img

By

Published : Feb 28, 2021, 2:33 PM IST

ಮೈಸೂರು: ಭರ್ಜರಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಮೂವರು ಮನೆಗಳ್ಳರನ್ನು ಬಂಧಿಸಿದ್ದಾರೆ.

ಮೈಸೂರಿನ ರಾಜೀವ್ ನಗರದ ಫಯಾಜ್, ಅಹ್ಮದ್ ಹಾಗೂ ಇಮ್ತಿಯಾಜ್ ಅಹಮದ್ ಬಂಧಿತ ಆರೋಪಿಗಳು. ಮೈಸೂರಿನ ರಿಂಗ್ ರಸ್ತೆಯ ನಾಯ್ಡು ನಗರದ ಜಂಕ್ಷನ್‍ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಯಾಂಟ್ರೋ ಕಾರಿನಲ್ಲಿ ಮನೆಗಳ್ಳತನ ಮಾಡಲು ಉಪಯೋಗಿಸುತ್ತಿದ್ದ ಪರಿಕರಗಳು ಹಾಗೂ ಕಳ್ಳತನ ಮಾಡುವಾಗ ತಪ್ಪಿಸಿಕೊಳ್ಳಲು ಸಲುವಾಗಿ ಬಳಸುತ್ತಿದ್ದ ಪಿಸ್ತೂಲ್ ಮಾದರಿಯ ಏರ್ ಗನ್ ಪತ್ತೆಯಾಗಿವೆ. ಈ ಸಂಬಂಧ ಆರೋಪಿಗಳನ್ನು ವಿಚಾರಣೆ ಮಾಡಲಾಗುತ್ತಿದೆ.

ಫೆ.10ರ ರಾತ್ರಿ ಮೈಸೂರು ನಗರದ ಎನ್‌.ಆರ್. ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷ ನಗರದ ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಈ ಸಂಬಂಧ ಮನೆಯವರು ಬೀಗ ಹಾಕಿಕೊಂಡು ಹೋಗಿದ್ದನ್ನು ಗಮನಿಸಿ, ಮನೆಯ ಕಿಟಕಿಯನ್ನು ಮುರಿದು ಮನೆಯೊಳಗೆ ನುಗ್ಗಿ 800 ಗ್ರಾಂ ತೂಕದ ಚಿನ್ನಾಭರಣ ಹಾಗೂ 60 ಸಾವಿರ ರೂ. ನಗದು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ‌.

ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನಂತರ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಕದ್ದು ತಂದ ಚಿನ್ನಾಭರಣಗಳನ್ನು ವಿಲೇವಾರಿ ಮಾಡಿದ್ದ ಮಂಡಿ ‌ಮೊಹಲ್ಲ ನಿವಾಸಿ ಮರಿಯಮ್ ಜ್ಯೂಯಲರ್ಸ್​ನ ಚಿನ್ನದ ವ್ಯಾಪಾರಿ ಮೊಹಮದ್ ಪರ್ವೀಜ್ (41) ಎಂಬಾತನನ್ನು ಕೂಡ ಫೆ.26 ರಂದು ಬಂಧಿಸಲಾಗಿದೆ.

1ನೇ ಆರೋಪಿ ಈ ಹಿಂದೆ ಸುಮಾರು 24 ಚಿನ್ನಾಭರಣ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿಯಾಗಿದ್ದ ಹಾಗೂ 3ನೇ ಆರೋಪಿ ಇದೇ ರೀತಿ ಬೇರೆ ಪ್ರಕರಣಗಳಲ್ಲಿ ಕಳುವಿನ ವಸ್ತುಗಳನ್ನು ಸ್ವೀಕರಿಸಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿಗಳು ನೀಡಿದ ಹೇಳಿಕೆ ಮೇರೆಗೆ ಉದಯಗಿರಿ ಶಾಖೆಯ ಮುತ್ತೂಟ್ ಫೈನಾನ್ಸ್ ಲಿಮಿಟೆಡ್‍ನಲ್ಲಿ ಗಿರವಿ ಇಟ್ಟಿದ್ದ ಹಾಗೂ ಇತರೆ ಕಡೆಗಳಲ್ಲಿ ವಿಲೇವಾರಿ ಮಾಡಿದ್ದ ಚಿನ್ನಾಭರಣಗಳು ಸೇರಿದಂತೆ 31 ಲಕ್ಷ ರೂ.ಮೌಲ್ಯದ 611 ಗ್ರಾಂ ತೂಕದ ಚಿನ್ನಾಭರಣ, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಸ್ಯಾಂಟ್ರೋ ಕಾರು ಹಾಗೂ ಮನೆಗಳ್ಳತನ ಮಾಡಲು ಬಳಸುತ್ತಿದ್ದ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೈಸೂರು ನಗರದಲ್ಲಿ ಮನೆ ಕಳ್ಳತನ ಪ್ರಕರಣಗಳ ಪತ್ತೆಗಾಗಿ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಸಿಸಿಬಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತಂಡ ರಚನೆ ಮಾಡಿದ್ದರು. ಈ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

ಓದಿ: ಕಳ್ಳತನ ನಡೆಸಿ ಸಿಕ್ಕಿಬಿದ್ದ ಆರೋಪಿಗಳು ಪೊಲೀಸರ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.