ಮೈಸೂರು : ಹೊಸವರ್ಷಕ್ಕೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಲ್ಲಿ ವಿಶೇಷ ದರ್ಶನಕ್ಕೆ 300 ರೂ.ನಿಗದಿ ಮಾಡಲಾಗಿದೆ. ಇದಕ್ಕೆ ಭಕ್ತ ಸಮೂಹದಿಂದ ಆಕ್ಷೇಪ ಕೂಡ ಕೇಳಿ ಬಂದಿದೆ.
ಜನವರಿ 1ರಂದು ಶನಿವಾರ ಹಾಗೂ ಜನವರಿ 2ರಂದು ಭಾನುವಾರವಾಗಿರುವುದರಿಂದ ನಾಡ ದೇವಿ ಚಾಮುಂಡೇಶ್ವರಿ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ 100 ರೂ. ಇದ್ದ ವಿಶೇಷ ದರ್ಶನ ದರವನ್ನು 300 ರೂ.ಗೆ ಏರಿಸಲಾಗಿದೆ.
ಎರಡು ದಿವಸ ಮಾತ್ರ ವಿಶೇಷ ದರ್ಶನಕ್ಕೆ 300 ರೂ.ನಿಗದಿ ಮಾಡಲಾಗಿದೆ. ವಿಶೇಷ ದರ್ಶನ ಪಡೆಯುವ ಭಕ್ತಾದಿಗಳಿಗೆ ಲಾಡು ಪ್ರಸಾದ ನೀಡಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ಹೇಳಿದೆ. ಆದರೆ, ಭಕ್ತ ಸಮೂಹ ಇದಕ್ಕೆ ಬೇಸರ ವ್ಯಕ್ತಪಡಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಕೋವಿಡ್ ಅಬ್ಬರ ಶುರು ; ಇಂದು 832 ಮಂದಿಗೆ ಸೋಂಕು