ಮೈಸೂರು: ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ನಡುವೆ ನಡೆದಿರುವ ಘಟನೆಗಳ ಬಗ್ಗೆ ಅವರವರಿಗೆ ಮಾತ್ರ ಸತ್ಯಗೊತ್ತು ಎಂದು ಇಬ್ಬರ ಹೇಳಿಕೆಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಕುಟುಕಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಹಿನ್ನೆಲೆ ಅವರ ಪ್ರತಿಮೆಗೆ ಮಾರ್ಲಾಪಣೆ ಮಾಡಿದ್ರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದೆ. ನಾನು ಬಂದ ನಂತರ ಸಿದ್ದರಾಮಯ್ಯ ಅವರು ಕಾಂಗ್ರೆಸ್ಗೆ ಬಂದಿದ್ದು. ಸಿದ್ದರಾಮಯ್ಯ ಟೀಮ್ ಅಲ್ಲ. ನಾನೊಬ್ಬ ಮುಗ್ಧ ಅಮಾಯಕ, ನಾನೀಗ ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೀನಿ ಎಂದರು.
ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಅಲಂಕರಿಸಿದವರು. ಎಲ್ಲ ರೀತಿಯ ಅಧಿಕಾರವನ್ನು ಅನುಭವಿಸಿದ್ದಾರೆ. ಅವರಿಗೆ ಇದೀಗ ಏನು ಬೇಕಾಗಿಲ್ಲ. ಅವರಿಬ್ಬರ ವಿಚಾರ ನಾನೇಕೆ ಹೇಳಲಿ. ಅವರಿಬ್ಬರ ಸತ್ಯ ಅವರಿಗೆ ಮಾತ್ರ ಗೊತ್ತು. ಆದರೆ ಇಬ್ಬರು ಸತ್ಯ ಹೇಳುತ್ತಿಲ್ಲ ಎಂದರು.
ಇದನ್ನು ಓದಿ:ನೀರು ಕುಡಿಯುವುದನ್ನು ಬಿಟ್ಟು ಆನೆ ದಾಳಿಗೆ ಬಿದ್ದು ಓಡಿದ ಹುಲಿರಾಯ : ವಿಡಿಯೋ
ದಸರಾ ಮಹೋತ್ಸವದಲ್ಲಿ ಉಳಿದಿರುವ ಅನುದಾನವನ್ನ, ಪಂಚಲಿಂಗ ದರ್ಶನಕ್ಕೆ ಬಳಕೆ ಮಾಡಿಕೊಳ್ಳಲಾಗುವುದು. ತಜ್ಞರ ವರದಿಯಂತೆ ದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.