ಮೈಸೂರು: ಲಾಕ್ಡೌನ್ನಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಶೂಲ ಮಾಡಿ ಬೆಳೆ ಬೆಳೆದರೂ, ಮಾರಾಟ ಮಾಡುವುದಕ್ಕೆ ಸೂಕ್ತ ಮಾರುಕಟ್ಟೆಯಿಲ್ಲದೇ ಅನ್ನದಾತರು ಪರದಾಡುತ್ತಿದ್ದಾರೆ.
ಒಂದು ದಿನ ವಸ್ತು ಪ್ರದರ್ಶನದ ಆವರಣದಲ್ಲಿ, ಮತ್ತೊಂದು ದಿನ ಆರ್ಎಂಸಿ ಆವರಣದಲ್ಲಿ ಹೀಗೆ ದಿನಕ್ಕೊಂದು ಕಡೆ ಮಾರ್ಕೆಟ್ ವ್ಯವಸ್ಥೆ ಮಾಡಿದ್ರೆ, ನಾವು ತರಕಾರಿ ಮಾರೋದು ಹೇಗೆ ಅಂತಾ ಇಲ್ಲಿನ ರೈತರೊಬ್ಬರು ಪ್ರಶ್ನಿಸುತ್ತಿದ್ದಾರೆ. ದಿನಾ ಒಂದೊಂದು ಕಡೆ ಮಾರುಕಟ್ಟೆಯಿದ್ದರೆ, ಜನರು ತರಕಾರಿ ಖರೀದಿಸಲು ಹೇಗೆ ಬರ್ತಾರೆ. ಬೆಳೆದ ಬೆಳೆ ಮಾರಲು ಸರಿಯಾದ ಜಾಗ ಸಿಗದಿದ್ರೆ, ಜಮೀನಿನಲ್ಲಿ ನೇಣು ಹಾಕಿಕೊಳ್ಳಬೇಕಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.