ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಳೆ ಮಂಡಿಸಲಿರುವ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇದೇ ವೇಳೆ, ಸಚಿವರು ಕೋರ್ಟ್ ಮೊರೆ ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ರಾಜ್ಯದಲ್ಲಿ ನಗೆಪಾಟಲಿನ ಘಟನೆಗಳು ನಡೆಯುತ್ತಿವೆ. ಯಾರಿಗೆ ಯಾರು ಬುದ್ದಿ ಹೇಳ್ತಾರೋ, ಯಾರು ಯಾರಿಗೆ ಸಲಹೆ ನೀಡ್ತಾರೋ ಗೊತ್ತಿಲ್ಲ. ಇದೆಲ್ಲ ನೋಡಿದಾಗ ಕರ್ನಾಟಕ ಇಂತಹ ಪರಿಸ್ಥಿತಿಗೆ ಬಂತಲ್ಲ ಎಂದು ಜನ ಯೋಚಿಸುವಂತಾಗಿದೆ ಎಂದರು.
ಇದನ್ನೂ ಓದಿ: ಹೊಸ ತೆರಿಗೆ ವಿಧಿಸದ, ಹೆಚ್ಚು ಹೊಸ ಯೋಜನೆಗಳನ್ನು ಘೋಷಣೆ ಮಾಡದ ದೊಡ್ಡ ಬಜೆಟ್..!