ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಮಾತೇ ಇಲ್ಲ. ಅವರೇ ಸಿಎಂ ಆಗಿ ಅಧಿಕಾರ ಪೂರೈಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಭೇಟಿ ವಿಚಾರವಾಗಿ ಅನಗತ್ಯವಾಗಿ ಚರ್ಚೆ ಬೇಡ. ಕುಮಾರಸ್ವಾಮಿ ಅವರ ಕೆಲಸದ ಮೇರೆಗೆ ಭೇಟಿಯಾಗಿದ್ದಾರೆ ಎಂದು ತಿಳಿಸಿದರು.
ದಸರಾ ಉದ್ಘಾಟನೆ ಮಾಡಲು ಕೊರೊನಾ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಹಾಗೂ ಒತ್ತಾಡ ನಿರ್ಮಾಣವಾಗುವುದಿಲ್ಲ.ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತೀವಿ.ದಸರಾ ಸಂಬಂಧ ಮತ್ತೆ ಸಭೆ ಮಾಡುತ್ತೀವಿ ಎಂದು ಹೇಳಿದರು.