ಹುಣಸೂರು(ಮೈಸೂರು): ಪೊಲೀಸ್ ಠಾಣೆಯ ಮುಂದೆಯೇ ಇದ್ದ ಶ್ರೀಗಂಧದ ಮರವನ್ನು ತುಂಡರಿಸಿ ಕದ್ದೊಯ್ದಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.
ಎಸ್. ಜೆ ರಸ್ತೆಯ ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಆವರಣದ ಪಾರ್ಕ್ನಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಬೆಳಗ್ಗೆ ಮರವನ್ನು ಕೊಡಲಿಯಿಂದ ತುಂಡರಿಸಿ ತುಂಡುಗಳನ್ನು ಖದೀಮರು ಹೊತ್ತೊಯ್ದಿದ್ದಾರೆ.
ಸಾರ್ವಜನಿಕರು ನೀಡದ ಮಾಹಿತಿ ಮೇರೆಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಇದು ಮೂರನೇ ಗಂಧದ ಮರ ಕಳ್ಳತನವಾಗಿದೆ.