ಮೈಸೂರು: ಈಶ್ವರ ದೇವಾಲಯದ ಹುಂಡಿ ಒಡೆದು ಕಳ್ಳತನ ಮಾಡಿರುವ ಘಟನೆ ಶಾಸಕ ಜಿ.ಟಿ.ದೇವೇಗೌಡ ಸ್ವಗ್ರಾಮ ಗುಂಗ್ರಾಲ್ ಛತ್ರದಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕ ಜಿ.ಟಿ. ದೇವೇಗೌಡ ಸ್ವಗ್ರಾಮದ ಗುಂಗ್ರಾಲ್ ಛತ್ರದಲ್ಲಿ ಇರುವ ಪ್ರಸಿದ್ಧ ಹಾಗೂ ಪುರಾತನ ಈಶ್ವರ ದೇವಾಲಯಕ್ಕೆ ಲಗ್ಗೆಯಿಟ್ಟ ಕಳ್ಳರು ಹುಂಡಿಯನ್ನು ಒಡೆದು ಹಣ ದೋಚಿದ್ದಾರೆ.
ಈ ದೇವಾಲಯ ಊರ ಒಳಗಿದೆ. ಕಳೆದ 15 ದಿನಗಳ ಹಿಂದೆ ಇದೇ ಊರಿನಲ್ಲಿದ್ದ ಬಾರ್‌ಗೆ ನುಗ್ಗಿ ಹಣ ಹಾಗೂ ಮದ್ಯದ ಬಾಟಲಿಗಳನ್ನು ಕದ್ದು ಕೊಂಡೊಯ್ದ ಪ್ರಕರಣ ನಡೆದಿತ್ತು. ಈಗ ದೇವಾಲಯದ ಹುಂಡಿಯನ್ನ ಎಗರಿಸಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಸ್ಥಳಕ್ಕೆ ಇಲವಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.