ETV Bharat / state

ಮೈಸೂರು: ಕಬ್ಬಿನ ಗದ್ದೆಯಲ್ಲಿ ಸಿಕ್ಕ ಮೂರು ಚಿರತೆ ಮರಿಗಳನ್ನು ತಾಯಿ ಮಡಿಲಿಗೆ ಸೇರಿಸಿದ ಅರಣ್ಯ ಇಲಾಖೆ - ಮೈಸೂರು ಪ್ರಾದೇಶಿಕ ವಿಭಾಗದ ಅರಣ್ಯ ಇಲಾಖೆ

ಮೈಸೂರು ಜಿಲ್ಲೆಯ ಕಬ್ಬಿನ ಗದ್ದೆಯಲ್ಲಿ ಸಿಕ್ಕ ಮೂರು ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಮರಳಿ ತಾಯಿ ಮಡಿಲಿಗೆ ಸೇರಿಸಿದ ರೋಚಕ ಕಾರ್ಯಾಚರಣೆ ವಿಡಿಯೋ ಸ್ಟೋರಿ ಇಲ್ಲಿದೆ.

The forest department has reunited three leopard cubs with their mother
ಕಬ್ಬಿನ ಗದ್ದೆಯಲ್ಲಿ ಸಿಕ್ಕ ಮೂರು ಚಿರತೆ ಮರಿಗಳನ್ನು ತಾಯಿ ಮಡಿಲಿಗೆ ಸೇರಿಸಿದ ಅರಣ್ಯ ಇಲಾಖೆ
author img

By ETV Bharat Karnataka Team

Published : Dec 16, 2023, 9:01 PM IST

ಕಬ್ಬಿನ ಗದ್ದೆಯಲ್ಲಿ ಸಿಕ್ಕ ಮೂರು ಚಿರತೆ ಮರಿಗಳನ್ನು ತಾಯಿ ಮಡಿಲಿಗೆ ಸೇರಿಸಿದ ಅರಣ್ಯ ಇಲಾಖೆ

ಮೈಸೂರು: ಕಬ್ಬಿನ ಗದ್ದೆಯಲ್ಲಿ ಸಿಕ್ಕ ಮೂರು ಚಿರತೆ ಮರಿಗಳನ್ನು ಅರಣ್ಯ ಇಲಾಖೆ 10 ದಿನಗಳ ಯಶಸ್ವಿ ಕಾರ್ಯಾಚರಣೆಯ ನಂತರ ಮರಳಿ ತಾಯಿಯ ಮಡಿಲಿಗೆ ಸೇರಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಮೈಸೂರು ತಾಲೂಕಿನ ಆಯರಹಳ್ಳಿ ಗ್ರಾಮದ ಬಳಿ ಇರುವ ಕಬ್ಬಿನ ಗದ್ದೆಯೊಂದರಲ್ಲಿ ಮೂರು ಚಿರತೆ ಮರಿಗಳು ಕಾಣಿಸಿಕೊಂಡಿದ್ದವು. ಖಾಸಗಿ ಜಮೀನೊಂದರಲ್ಲಿ ಕಾಣಿಸಿಕೊಂಡಿದ್ದ ಆ ಮೂರು ಚಿರತೆ ಮರಿಗಳನ್ನು ರಕ್ಷಿಸಿ, ಪುನಃ ತಾಯಿಯ ಮಡಿಲಿಗೆ ಸೇರಿಸಿದ ಮೈಸೂರು ಪ್ರಾದೇಶಿಕ ವಿಭಾಗದ ಅರಣ್ಯ ಇಲಾಖೆಯ ಮತ್ತು ಮೃಗಾಲಯ ಹಾಗೂ ಮೈಸೂರು ವನ್ಯಜೀವಿ ವಿಭಾಗದ ಸಿಬ್ಬಂದಿ ರೋಚಕ ಕಾರ್ಯಾಚರಣೆಯ ಹಿನ್ನೋಟ ಇಲ್ಲಿದೆ.

ಆಯರಹಳ್ಳಿ ಬಳಿಯ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಗ್ರಾಮಸ್ಥರಿಗೆ ದೊರೆತ ಮಾಹಿತಿಯಂತೆ ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಹೋಗಿ, ಮೂರು ಚಿರತೆ ಮರಿಗಳನ್ನು ವಶಕ್ಕೆ ಪಡೆದಿದ್ದರು. ಅದೇ ಸ್ಥಳದಲ್ಲಿ ಪ್ರತ್ಯೇಕವಾದ ಪೆಟ್ಟಿಗೆಯಲ್ಲಿ ಆ ಮರಿಗಳನ್ನು ಇರಿಸಿ, ತಾಯಿ ಚಿರತೆ ಬಂದು ಮರಿಗಳನ್ನು ತೆಗೆದುಕೊಂಡು ಹೋಗುವಂತೆ ಮಾಡಲಾಗಿತ್ತು. ಸ್ಥಳದಲ್ಲಿ ಕ್ಯಾಮರಾ ಸಹ ಅಳವಡಿಸಲಾಗಿತ್ತು.

ಆದರೆ ತಾಯಿ ಚಿರತೆ ಬಾರದ ಕಾರಣದಿಂದ ಎರಡನೇ ದಿನದಂದು ಸಂಜೆ 5 ಗಂಟೆಯ ವೇಳೆಗೆ ಮರಿಗಳು ದೊರೆತ ಸ್ಥಳದಲ್ಲಿ ಟ್ರಾಪ್ ಕೇಜ್ ಅಳವಡಿಸಲಾಗಿತ್ತು. ಸರಿಸುಮಾರು 6 ಗಂಟೆ ವೇಳೆಗೆ ತಾಯಿ ಚಿರತೆ ಬೋನಿಗೆ ಬಿದ್ದಾಗ ಮೇಲಧಿಕಾರಿಗಳ ಸೂಚನೆಯಂತೆ ತಾಯಿ ಮತ್ತು ಮರಿ ಚಿರತೆಗಳನ್ನು ಚಾಮುಂಡಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಗಿತ್ತು. ಕೂಡಲೇ ನುರಿತ ವೈದ್ಯರ ತಂಡ ಮರಿ ಮತ್ತು ತಾಯಿ ಚಿರತೆಗಳನ್ನು ಬೇರ್ಪಡಿಸಿ, ಸಿಸಿಟಿವಿ ಅಳವಡಿಸಿ ನಿಗಾವಹಿಸಲಾಗಿತ್ತು. ಮೂರನೇ ಮತ್ತು ನಾಲ್ಕನೇ ದಿನ ಮುಂದಿನ 48 ಗಂಟೆಗಳ ಕಾಲ ಹೆಣ್ಣು ಚಿರತೆ ಹಾಗೂ ಮರಿಗಳು ಪರಸ್ಪರ ಹೊಂದಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ನಂತರ ಐದನೇ ದಿನ ತಾಯಿ ಮತ್ತು ಮರಿ ಚಿರತೆಗಳನ್ನು ಕಾಡಿಗೆ ಕೊಂಡೊಯ್ಯಲಾಗಿತ್ತು. ಕಾಡಿನಲ್ಲಿ ತಾಯಿ ಚಿರತೆ ಮರಿಗಳನ್ನು ಬಿಟ್ಟು ಹೋಗದಂತೆ ಮಾಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಬಿಡಲಾಗಿತ್ತು. ಆರನೇ ದಿನ ಕಿಟಕಿಯನ್ನು ಒಡೆದು ಹೊರಗೆ ಬಂದು ಸುರಕ್ಷಿತ ಅವಾಸ ಸ್ಥಾನಕ್ಕೆ ಹುಡುಕಾಟ ನಡೆಸಿದ್ದು, ಏಳನೇ ದಿನ ಮರಿಗಳಿದ್ದ ಸ್ಥಳಕ್ಕೆ ತಾಯಿ ಚಿರತೆ ಬಂದು ಹೊರಗಿನಿಂದಲೇ ಪರಿಶೀಲನೆ ನಡೆಸಿ ವಾಪಸ್ ಆಗಿತ್ತು.

ಎಂಟನೆಯ ದಿನ ತಾಯಿ ಚಿರತೆ ಬಾರದ ಕಾರಣದಿಂದ ಸಿಬ್ಬಂದಿಗಳು ಮರಿಗಳಿಗೆ ಹಾಲುಣಿಸಿ ಶುಶ್ರೂಷೆ ಮಾಡಿದ್ದರು. ನಂತರ ಒಂಬತ್ತನೇ ದಿನ ತಾಯಿ ಚಿರತೆ ಬಂದು ಕಪ್ಪು ಚಿರತೆ ಮರಿ ಸೇರಿದಂತೆ 2 ಮರಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿತ್ತು. ಕೊನೆಗೆ ಹತ್ತನೇ ದಿನ ಉಳಿದ ಒಂದು ಮರಿಯನ್ನು ತಾಯಿ ಚಿರತೆ ಬಂದು ತೆಗೆದುಕೊಂಡು ಹೋಗಿದ್ದು, ಈ ಮೂಲಕ ಮೈಸೂರು ಪ್ರಾದೇಶಿಕ ವಿಭಾಗ ಮತ್ತು ಮೈಸೂರು ಮೃಗಾಲಯ ಹಾಗೂ ವನ್ಯಜೀವಿ ವಿಭಾಗದಿಂದ ಜಂಟಿಯಾಗಿ ಮಾಡಿದ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಚಿರತೆ ಮರಿಗಳು ತಾಯಿ ಚಿರತೆಯೊಂದಿಗೆ ಪುನರ್ಮಿಲನದ ಕಾರ್ಯಾಚರಣೆ ಈ ಮೂಲಕ ಯಶಸ್ವಿಯಾಗಿದೆ.

ಈ ಬಗ್ಗೆ ಡಿಸಿಎಫ್ ಬಸವರಾಜು ಈಟಿವಿ ಭಾರತಗೆ ಮಾಹಿತಿ ನೀಡಿ, ಕಬ್ಬಿನ ಗದ್ದೆಯಲ್ಲಿ ಸಿಕ್ಕ ಮರಿಗಳನ್ನು ಪುನಃ ತಾಯಿ ಮಡಿಲಿಗೆ ಸೇರಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದ್ದು, ಆ ಯೋಜನೆಯಂತೆ ತಾಯಿ ಮಡಿಲಿಗೆ ಪುನಃ ಮೂರು ಚಿರತೆ ಮರಿಗಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದೆ. ಇದು ತಮಗೆಲ್ಲಾ ಸಂತೋಷ ಉಂಟು ಮಾಡಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ... ವಿಡಿಯೋ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.