ETV Bharat / state

ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ರಾಯಭಾರಿಗಳಾಗಿ ದಿ ಎಲಿಫೆಂಟ್‌ ವಿಸ್ಪರರ್ಸ್‌ ಖ್ಯಾತಿ ಬೊಮ್ಮನ್‌- ಬೆಳ್ಳಿ ದಂಪತಿ ಆಯ್ಕೆ - ಆಸ್ಕರ್‌ ವಿಜೇತ ಸಾಕ್ಷ್ಯಚಿತ್ರ

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಕಾಲ್‌ ಇಂಡಿಯಾ ಇಂಟರ್‌ನ್ಯಾಷನಲ್‌ ಆಶ್ರಯದಲ್ಲಿ ಮೈಸೂರಿನಲ್ಲಿ ಅಕ್ಟೋಬರ್‌ 4 ರಿಂದ 8ರ ವರೆಗೆ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ಕಾರ್ಯಕ್ರಮ ಆಯೋಜಿಸಲಾಗಿದೆ.

ambassador of Skull India Congress
ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ನ ರಾಯಭಾರಿಯಾಗಲೂ ಬೊಮ್ಮನ್‌ ಬೆಳ್ಳಿ ದಂಪತಿಗೆ ಕೋರಿರುವುದು.
author img

By

Published : Aug 1, 2023, 8:39 PM IST

ಮೈಸೂರು: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಸ್ಕಾಲ್‌ ಇಂಡಿಯಾ ಇಂಟರ್‌ನ್ಯಾಷನಲ್‌ ವತಿಯಿಂದ ಅಕ್ಟೋಬರ್‌ 4ರಿಂದ 8ರ ವರೆಗೆ ನಡೆಯಲಿರುವ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ಕಾರ್ಯಕ್ರಮಕ್ಕೆ ಆಸ್ಕರ್‌ ವಿಜೇತ ಸಾಕ್ಷ್ಯಚಿತ್ರ ʻದಿ ಎಲಿಫೆಂಟ್‌ ವಿಸ್ಪರರ್ಸ್‌ʼ ಖ್ಯಾತಿಯ ಬೊಮ್ಮನ್‌ ಹಾಗೂ ಬೆಳ್ಳಿ ದಂಪತಿಯನ್ನು ರಾಯಭಾರಿಗಳಾಗಿ ಘೋಷಣೆ ಮಾಡಲಾಯಿತು.

ಇತ್ತೀಚೆಗೆ ಬೊಮ್ಮನ್‌ ಮತ್ತು ಬೆಳ್ಳಿ ದಂಪತಿ ಮನೆಗೆ ಭೇಟಿ ನೀಡಿದ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ತಂಡವು ಕಾರ್ಯಕ್ರಮದ ರಾಯಭಾರಿಗಳಾಗಲು ಕೋರಿದರು. ಇಬ್ಬರು ಖುಷಿಯಿಂದ ಒಪ್ಪಿಗೆ ನೀಡಿದ್ದು ಮಾತ್ರವಲ್ಲದೇ ಅಕ್ಟೋಬರ್‌ 4ರಂದು ಮೈಸೂರಿನಲ್ಲಿ ನಡೆಯಲಿರುವ ಉದ್ಘಾಟನೆ ಕಾರ್ಯಕ್ರಮಕ್ಕೆ ಹಾಗೂ ನಂತರ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೂ ಆಗಮಿಸುವುದಕ್ಕೆ ಒಪ್ಪಿಗೆ ಸೂಚಿಸಿದರು.

ಈ ವೇಳೆ ಮಾತನಾಡಿದ ಬೊಮ್ಮನ್‌ ಅವರು, ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ನ ಮೂಲ ಉದ್ದೇಶದ ಪ್ರವಾಸೋದ್ಯಮದ ಸುಸ್ಥಿರ ಅಭಿವೃದ್ಧಿ ಬಗ್ಗೆ ಕೇಳಿ ಬಹಳ ಖುಷಿಯಾಯಿತು. ನಮ್ಮ ದೇಶದ ನೈಸರ್ಗಿಕ ಸಂಪತ್ತು ಸಾಕಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ನಮ್ಮ ನೈಸರ್ಗಿಕ ಸಂಪತ್ತು ಉಳಿಯಬೇಕು ಎಂದರೆ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಇಂತಹ ಕಾರ್ಯಕ್ರಮ ಅತ್ಯಗತ್ಯ. ಈ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು.

ಇದೇ ವೇಳೆ ಸ್ಕಾಲ್‌ನ ಸದಸ್ಯರು ಮಾತನಾಡಿ, ಸುಸ್ಥಿರ ಪ್ರವಾಸೋದ್ಯಮದ ಅಭಿವೃದ್ಧಿ, ನಮ್ಮ ಭೂಮಿಯ ರಕ್ಷಣೆ ಹಾಗೂ ಮೌಲಿಕ ಲಾಭ ಸಂಪಾದನೆಯನ್ನು ಉತ್ತೇಜಿಸುವುದು ನಮ್ಮ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ನಮ್ಮ ಮಣ್ಣಿನವರು, ಪ್ರಕೃತಿಗೆ ಆಪ್ತವಾಗಿರುವವರು ರಾಯಭಾರಿಗಳಾಗಬೇಕಿತ್ತು. ಇದಕ್ಕೆ ಬೊಮ್ಮನ್‌ ಹಾಗೂ ಬೆಳ್ಳಿವರಿಗಿಂತ ಮತ್ಯಾರೂ ಸೂಕ್ತರಲ್ಲ ಎನಿಸಿದಾಗ ಅವರೊಂದಿಗೆ ಮಾತನಾಡಿದೆವು. ನಮ್ಮ ಕಾರ್ಯಕ್ರಮದ ರಾಯಭಾರಿಗಳಾಗಲು ಅವರು ಖುಷಿಯಿಂದ ಒಪ್ಪಿದ್ದಾರೆ. ಇದಲ್ಲದೇ ನಮ್ಮ ಕಾರ್ಯಕ್ರಮದ ಲಾಂಛನ ಆನೆ. ಆನೆಯೊಂದಿಗೆ ಬೊಮ್ಮನ್‌ ಹಾಗೂ ಬೆಳ್ಳಿಗೆ ಇರುವ ಆತ್ಮೀಯತೆ ಇಡೀ ಜಗತ್ತಿಗೆ ತಿಳಿದಿದೆ. ಇದು ಪ್ರಾಣಿ ಹಾಗೂ ಮನುಷ್ಯನ ನಡುವಿನ ಸಾಮರಸ್ಯದ ಸಂಕೇತ. ಈ ಎಲ್ಲ ಕಾರಣಗಳಿಂದ ಇವರಿಬ್ಬರೂ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ನ ರಾಯಭಾರಿಗಳಾಗಿದ್ದಾರೆ ಎಂದು ವಿವರಿಸಿದರು.

ಈ ವೇಳೆ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ನ ಚೇರ್‌ಮನ್‌ ಸುದೀಪ್ತಾ ದೇಬ್‌, ಸ್ಕಾಲ್‌ ಮೈಸೂರು ವಿಭಾಗದ ಅಧ್ಯಕ್ಷ ಬಿ.ಎಸ್.ಪ್ರಶಾಂತ್‌, ಸ್ಕಾಲ್‌ ಬೆಂಗಳೂರು ವಿಭಾಗದ ಅಧ್ಯಕ್ಷ ಅಯ್ಯಪ್ಪ ಸೋಮಯ್ಯ, ಮಣಿಮೇಗಲೈ, ಅನುರಾಗ್‌ ಗುಪ್ತಾ ಮತ್ತಿತರರು ಹಾಜರಿದ್ದರು.

ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌: ಸ್ಕಾಲ್‌ ಇಂಟರ್‌ ನ್ಯಾಷನಲ್‌ ಇಂಡಿಯಾದಿಂದ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಅಕ್ಟೋಬರ್‌ 4ರಿಂದ 7ರ ವರೆಗೆ ಮೈಸೂರು ಹಾಗೂ ಬೆಂಗಳೂರಿನಲ್ಲಿ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ಕಾರ್ಯಕ್ರಮ ನಡೆಯಲಿದೆ. ಪ್ರವಾಸೋದ್ಯಮದ ಏಳ್ಗೆಗೆ, ಅಭಿವೃದ್ಧಿಗೆ ಶ್ರಮಿಸುವ ವೃತ್ತಿಪರರ ಸಮಾಗಮ ಇದಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಮೂರು ತಿಂಗಳು ಕಾಲ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ವಿವಿಧ ಚಟುವಟಿಕೆ ನಡೆಯಲಿವೆ.

ಸ್ಕಾಲ್‌ ಇಂಟರ್‌ನ್ಯಾಷನಲ್‌ : ಸ್ಕಾಲ್‌ ಇಂಟರ್‌ನ್ಯಾಷನಲ್‌ ಎಂಬುದು ಕಳೆದ 85 ವರ್ಷಗಳಿಂದ ಇಡೀ ಜಗತ್ತಿನ ಪ್ರವಾಸೋದ್ಯಮವನ್ನು ಒಂದೇ ಸೂರಿನಡಿಯಲ್ಲಿರಿಸಿ ಪ್ರವಾಸೋದ್ಯಮದ ಏಳ್ಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆ. ಇದು UNWTOನ ಅಫಿಲಿಯೇಟ್‌ ಸದಸ್ಯ ಸಂಸ್ಥೆಯಾಗಿದೆ. ಪ್ರಪಂಚದಾದ್ಯಂತ ಬರೋಬ್ಬರಿ 95 ರಾಷ್ಟ್ರಗಳಲ್ಲಿ ಸ್ಕಾಲ್‌ನ ವಿಭಾಗಗಳಿವೆ. ಎಲ್ಲದರಲ್ಲೂ ಸೇರಿ 12,500ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಭಾರತದ 16 ನಗರಗಳಲ್ಲಿ ಸ್ಕಾಲ್‌ನ 17 ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ.

ಇದನ್ನೂಓದಿ: NWKRTC ಹೊಸ ಪ್ರಯೋಗ: ಜಲಪಾತಗಳ ವೀಕ್ಷಣೆಗೆ ವಿಶೇಷ ಬಸ್: ಶಕ್ತಿ ಯೋಜನೆಗಿಲ್ಲ ಅವಕಾಶ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.