ETV Bharat / state

ಅವೈಜ್ಞಾನಿಕ ಕಾಮಗಾರಿಗೆ ರಸ್ತೆಯಲ್ಲಿ ಮುಗುಚಿ ಬಿದ್ದ ಕ್ಯಾಂಟರ್ - across the road to unscientific work

ನೀರು ಸರಬರಾಜು ಇಲಾಖೆಯ ವತಿಯಿಂದ ತಿ.ನರಸೀಪುರ ಪಟ್ಟಣದಾದ್ಯಂತ ನಡೆಯುತ್ತಿರುವ ಕುಡಿಯುವ ನೀರಿನ ಪೈಪ್​​ಲೈನ್ ಕಾರ್ಯಕ್ಕಾಗಿ ಗುಂಡಿ ತೆಗೆದು ಸರಿಯಾಗಿ ಮುಚ್ಚದೇ ಹೋಗಿರುವುದರಿಂದ ಗುಂಡಿಗೆ ಚಕ್ರ ಸಿಲುಕಿ ಭತ್ತ ತುಂಬಿದ್ದ ಕ್ಯಾಂಟರ್ ಮಗುಚಿ ಮನೆಯೊಂದರ ಮುಂದೆ ಬಿದ್ದಿದೆ. ಈ ವೇಳೆ ಯಾರೂ ಇಲ್ಲದಿದ್ದರಿಂದ ಅನಾಹುತ ತಪ್ಪಿದೆ.

ಕ್ಯಾಂಟರ್
ಕ್ಯಾಂಟರ್
author img

By

Published : Jan 9, 2021, 8:37 PM IST

ಮೈಸೂರು: ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಕ್ಯಾಂಟರ್​ವೊಂದು ಮಗುಚಿ ಬಿದ್ದ ಘಟನೆ ತಿ.ನರಸೀಪುರ ಪಟ್ಟಣದ ಕಡ್ಲೆ ರಂಗಮ್ಮ ಬೀದಿಯಲ್ಲಿ ನಡೆದಿದೆ.

ನೀರು ಸರಬರಾಜು ಇಲಾಖೆಯ ವತಿಯಿಂದ ತಿ.ನರಸೀಪುರ ಪಟ್ಟಣದಾದ್ಯಂತ ನಡೆಯುತ್ತಿರುವ ಕುಡಿಯುವ ನೀರಿನ ಪೈಪ್​​ಲೈನ್ ಕಾರ್ಯಕ್ಕಾಗಿ ಗುಂಡಿ ತೆಗೆದು ಸರಿಯಾಗಿ ಮುಚ್ಚದೇ ಹಾಗೇ ಬಿಡಲಾಗಿದೆ. ಇದೇ ರಸ್ತೆಯಲ್ಲಿ ಬೃಹತ್​ ವಾಹನಗಳು ದಿನನಿತ್ಯ ಸಂಚರಿಸುತ್ತವೆ. ಇಂದು ಕೂಡ ಭತ್ತ ತುಂಬಿದ್ದ ಕ್ಯಾಂಟರ್ ಬಂದಾಗ ಗುಂಡಿಗೆ ಚಕ್ರ ಸಿಲುಕಿ ಮಗುಚಿ ಮನೆಯೊಂದರ ಮುಂದೆ ಬಿದ್ದಿದೆ. ಈ ವೇಳೆ ಯಾರೂ ಇಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಅವೈಜ್ಞಾನಿಕ ಕಾಮಗಾರಿಗೆ ರಸ್ತೆಯಲ್ಲಿ ಮುಗುಚಿ ಬಿದ್ದ ಕ್ಯಾಂಟರ್

ನೀರು ಸರಬರಾಜು ಇಲಾಖೆಯ ಕಾರ್ಯವೈಖರಿಗೆ ಜನರಿಂದ ಛೀಮಾರಿ ವ್ಯಕ್ತವಾಗಿದೆ. ನರಸೀಪುರ ಪಟ್ಟಣದಾದ್ಯಂತ 24X7 ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ. ಸುಂದರವಾಗಿದ್ದ ರಸ್ತೆಯನ್ನು ಅಗೆದು ಹಾಳು ಮಾಡಿದ್ದಾರೆ. ಪೈಪ್​​ಲೈನ್ ಅಳವಡಿಸಲು ರಸ್ತೆ ಅಗೆದು ಸರಿಯಾಗಿ ಮಣ್ಣು ಹಾಕಿ ಮುಚ್ಚದೇ ಹಾಗೆಯೇ ಬಿಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ದೂರು ನೀಡಿದರೆ ಸಾರ್ವಜನಿಕರ ಬಳಿ ಗುಂಡಾವರ್ತನೆ ತೋರುತ್ತಾರೆ ಎಂದು ಸ್ಥಳೀರು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.