ಮೈಸೂರು: ಕೇರಳದ ಮೂಲದ ಟೆಕ್ಕಿಯೊಬ್ಬ ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ. ಈ ವ್ಯಕ್ತಿಯನ್ನು ನರಸಿಂಹರಾಜ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ನಗರದ ಹಳೆ ಕೆಸರೆ ಬಳಿಯ ಕಾಮನ ಕೆರೆ ಹುಂಡಿ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಅನಧಿಕೃತವಾಗಿ ಸಿಮ್ ಬಾಕ್ಸ್, ರೂಟರ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಯನ್ನಾಗಿ ಪರಿವರ್ತಿಸಿ ಸರ್ಕಾರಕ್ಕೆ ಹಾಗೂ ಮೊಬೈಲ್ ಸೇವಾ ಸಂಸ್ಥೆಗಳಿಗೆ ವಂಚನೆ ಮಾಡುತ್ತಿದ್ದ.
ಆರೋಪಿಯಿಂದ ವಂಚನೆಗೆ ಬಳಸುತ್ತಿದ್ದ ಡಿ-ಲಿಂಕ್ ವೈಫೈ ವಿತ್ ಸಿಮ್ ಸ್ಲಾಟ್, 5 ಬೇಸಿಕ್ ಮೊಬೈಲ್, 3 ಕಂಪ್ಯೂಟರ್‌ಗಳು, ಡಿಜಿಟಲ್ ಟೈಮರ್, ಸಿಮ್ ಕಾರ್ಡ್‌ಗಳು, ಇಂಟರ್ನೆಟ್ ಮೋಡಮ್‌ಗಳು, 32 ಪೋರ್ಟ್ ಹೊಂದಿರುವ 4 ಸಿಮ್ ಬಾಕ್ಸ್ ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಗನ್ಗಳು ಪತ್ತೆ: ಅಧಿಕಾರಿಗಳಲ್ಲಿ ಆತಂಕ!