ಮೈಸೂರು: ನಂಜನಗೂಡು ತಾಲೂಕಿನ ಹುಚ್ಚಗಣಿ ಗ್ರಾಮದಲ್ಲಿರುವ ಮಹದೇವಮ್ಮ ದೇವಾಲಯವು ಸರ್ಕಾರಿ ಜಾಗದಲ್ಲಿಯೇ ಇತ್ತು ಎಂಬ ತಹಶೀಲ್ದಾರ್ ನೀಡಿರುವ ನಕ್ಷೆಯಲ್ಲಿ ಬಹಿರಂಗವಾಗಿದೆ. 2011ರಲ್ಲಿ ಈ ನಕ್ಷೆಯನ್ನ ನೀಡಲಾಗಿದ್ದು, ದೇವಾಲಯವು ಹೆದ್ದಾರಿ ಪಕ್ಕದ ಸರ್ಕಾರಿ ಜಾಗದಲ್ಲಿಯೇ ಇತ್ತು ಎಂಬುದು ತಿಳಿದುಬಂದಿದೆ.
ಹರದನಹಳ್ಳಿ ಸರ್ವೇ ನಂ.126ರ ಪಕ್ಕದಲ್ಲಿ ದೇವಾಲಯ ನಿರ್ಮಾಣಗೊಂಡಿದೆ. ರಾಜ್ಯ ಹೆದ್ದಾರಿ 57ರ ಸರ್ಕಾರಿ ಜಾಗದಲ್ಲಿದೆ ಎಂದು ನಕ್ಷೆಯಲ್ಲಿ ಉಲ್ಲೇಖವಾಗಿದೆ. ತಹಶೀಲ್ದಾರರ ಮೌಖಿಕ ಆದೇಶದ ಮೇರೆಗೆ ಆಗಸ್ಟ್ 12ರಂದು ನಂಜನಗೂಡು ಭೂಮಾಪಕರಿಂದ ಸರ್ವೇ ಕಾರ್ಯ ನಡೆದಿದೆ. ಸದ್ಯ ಸರ್ವೇಯಲ್ಲಿ ಸರ್ಕಾರಿ ಜಾಗ ಎಂದು ವರದಿ ನೀಡಲಾಗಿದೆ.
ಕಳೆದ ಸೆ.10ರಂದು ಸುಪ್ರೀಂಕೋರ್ಟ್ ಆದೇಶದಂತೆ ದೇವಾಲಯ ತೆರವುಗೊಳಿಸಲಾಗಿತ್ತು. ಇದಾದ ಬಳಿಕ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆಗ ತಕ್ಷಣವೇ ದೇವಾಲಯ ತೆರವು ಕಾರ್ಯಾಚರಣೆ ನಿಲ್ಲಿಸಲಾಗಿತ್ತು.
ಇದನ್ನೂ ಓದಿ: ಮೈಸೂರಲ್ಲಿ ದೇವಸ್ಥಾನ ತೆರವು ಪ್ರಕರಣ: ಈಶ ವಿಠಲದಾಸ ಸ್ವಾಮೀಜಿ ಖಂಡನೆ