ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ನಡೆಯುತ್ತಿರುವ ಸಿಎಂ ಸ್ಥಾನದ ಜಟಾಪಟಿ ನಡುವೆ ಇದೀಗ ಶಾಸಕ ತನ್ವೀರ್ ಸೇಠ್ ಎಂಟ್ರಿ ಕೊಟ್ಟಿದ್ದಾರೆ. ಕಾಂಗ್ರೆಸ್ನಲ್ಲಿ ಭುಗಿಲೆದ್ದಿರುವ ಮುಂದಿನ ಸಿಎಂ ವಿಚಾರವಾಗಿ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.
ಅಲ್ಪಸಂಖ್ಯಾತರು ಸಿಎಂ ಆಗಬೇಕು ಎನ್ನುವ ಆಸೆ ಇಟ್ಟುಕೊಳ್ಳುವುದು ತಪ್ಪಲ್ಲ. ಅಲ್ಪಸಂಖ್ಯಾತರು ಯಾರು ಸಮರ್ಥರಿದ್ದಾರೆ ಅವರೆಲ್ಲ ಸಿಎಂ ಆಗುವ ಆಸೆ ಇಟ್ಟುಕೊಳ್ಳಬಹುದು. ಪೈಪೋಟಿ ಮಾಡುವುದರಲ್ಲಿ ನಾನೂ ಸಮರ್ಥ ಇದ್ದೇನೆ ಎಂದು ಮುಂದಿನ ಸಿಎಂ ವಿಚಾರವಾಗಿ ಹೊಸ ಬಾಂಬ್ ಸಿಡಿಸಿದರು.
ಯಾರೋ ಬೆಂಬಲಿಗರ ಬಾಯಲ್ಲಿ ಸಿಎಂ ಆಗಬೇಕು ಎಂಬ ಹೇಳಿಕೆ ಕೂಗಿಸುವುದು ಸರಿಯಲ್ಲ. ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಮೊದಲು ಆದ್ಯತೆ ಕೊಡಬೇಕು. ಪಕ್ಷಕ್ಕೆ ಹಿನ್ನಡೆಯಾಗುವಂತಹ ವರ್ತನೆ ಸರಿಯಲ್ಲ. ಪಕ್ಷದಲ್ಲಿ ವ್ಯಕ್ತಿ ಪೂಜೆ ಸರಿಯಲ್ಲ, ಪಕ್ಷ ಸಿದ್ಧಾಂತಕ್ಕೆ ಬದ್ಧವಾಗಿರಬೇಕು ಎಂದು ಮಾಜಿ ಸಿದ್ದರಾಮಯ್ಯರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ರಮೇಶ ಜಾರಕಿಹೊಳಿ ಸುತ್ತೂರು ಮಠ ಭೇಟಿಯಲ್ಲಿ ವಿಶೇಷತೆ ಏನೂ ಇಲ್ಲ : ಡಾ.ಕೆ. ಸುಧಾಕರ್
ಪಕ್ಷದ ಆದೇಶ ಉಲ್ಲಂಘನೆಯಾದಾಗ ಪಕ್ಷ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಮೊದಲು ರಾಜ್ಯ ಬಿಜೆಪಿಯ ವೈಫಲ್ಯವನ್ನು ಜನರಿಗೆ ತಿಳಿಸಿ ಪಕ್ಷ ಅಧಿಕಾರಕ್ಕೆ ತರಲು ಹೋರಾಟ ಮಾಡಬೇಕು ಎಂದರು.