ETV Bharat / state

ಲಾಕ್​ಡೌನ್ ಪರಿಣಾಮ‌ ಬೀದಿಗೆ ಬಿದ್ದ ಟಾಂಗಾವಾಲರ ಬದುಕು!

ಟಾಂಗಾವಾಲರ ಬದುಕು ಲಾಕ್​ಡೌನ್​ನಿಂದ ಅಕ್ಷರಶಃ ಬೀದಿಗೆ ಬಿದ್ದಿದೆ. ದುಡಿಮೆ ಇಲ್ಲದೇ, ಕುದುರೆಗೆ ಹುಲ್ಲು ಹಾಕಲು ಹಣ ಇಲ್ಲದ ಪರಿಸ್ಥಿತಿ ಇದೆ.

tangawalas suffer due to lockdown
tangawalas suffer due to lockdown
author img

By

Published : May 12, 2021, 5:14 PM IST

ಮೈಸೂರು: ಟಾಂಗಾವಾಲರ ಬದುಕು ಲಾಕ್​ಡೌನ್​ನಿಂದ ಅಕ್ಷರಶಃ ಬೀದಿಗೆ ಬಿದ್ದಿದ್ದು, ಕುದುರೆಗಳಿಗೆ ಮೇವು ಹಾಕಲು ಹಣವಿಲ್ಲದ ಪರಿಸ್ಥಿಯಲ್ಲಿ ಟಾಂಗಾವಾಲರು‌ ಇದ್ದಾರೆ.

ಪಾರಂಪರಿಕ ನಗರಿ ಮೈಸೂರಿನಲ್ಲಿ ರಾಜಪರಂಪರೆಯ ಪ್ರತೀಕವಾಗಿ ಇಂದಿಗೂ ಸಹ ಟಾಂಗಾ ಸವಾರಿ ಪ್ರವಾಸಿಗರಿಗೆ ಅಚ್ಚುಮೆಚ್ಚಾಗಿದೆ. ಪ್ರವಾಸಿಗರನ್ನೇ ನಂಬಿ ಬದುಕುವ ಈ ಟಾಂಗಾ ಗಾಡಿಗಳು ಲಾಕ್​ಡೌನ್​ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿವೆ.

ಟಾಂಗಾವಾಲರಿಗೆ ಸಂಕಷ್ಟ

ಲಾಕ್​ಡೌನ್ ಪರಿಣಾಮ ಪ್ರವಾಸಿಗರು ಬಾರದ ಹಿನ್ನೆಲೆಯಲ್ಲಿ ದುಡಿಮೆ ಇಲ್ಲ, ಕುದುರೆಗೆ ಹುಲ್ಲು ಸಹ ಇಲ್ಲ, ನಮಗೂ ಊಟ ಇಲ್ಲ. ಮೈಸೂರು ನಗರದಲ್ಲಿ 50ಕ್ಕೂ ಹೆಚ್ಚು ಟಾಂಗಾ ಗಾಡಿಗಳಿದ್ದು, ಸಾಮನ್ಯ ಕುದುರೆಗೆ ಪ್ರತಿದಿನ 50ರಿಂದ 100 ರೂಪಾಯಿ ಹಣ ಬೇಕು. ವಿಶೇಷ ಕುದುರೆಗೆ 300 ರೂ. ಬೇಕು. ಈಗ ಬಾಡಿಗೆ ಇಲ್ಲದೇ ಕುದುರೆಗಳನ್ನು ಸಾಕಲು ಕಷ್ಟವಾಗುತ್ತಿದ್ದು, ಸರ್ಕಾರ ಅಥವಾ ದಾನಿಗಳು ಸಹಾಯ ನೀಡಬೇಕೆಂದು ಟಾಂಗಾವಾಲ ಅಕ್ರಮ್ ಪಾಷ ಮನವಿ ಮಾಡಿದ್ದಾರೆ.

tangawalas suffer due to lockdown
ಟಾಂಗಾವಾಲರಿಗೆ ಸಂಕಷ್ಟ

60 ವರ್ಷಗಳಿಂದಲೂ ಟಾಂಗಾ ಓಡಿಸಿಕೊಂಡು ಜೀವನ ನಡೆಸುತ್ತಿರುವ ವ್ಯಕ್ತಿ ಮಹಮ್ಮದ್ ರೋಶಿ, ಮೈಸೂರು ಟಾಂಗಾ ಪ್ರಪಂಚದಲ್ಲೇ ಪ್ರಸಿದ್ಧಿ. ಪ್ರವಾಸಿಗರನ್ನು ನಂಬಿ ಬದುಕು ನಡೆಸುತ್ತಿದ್ದೆವು. ಹಿಂದೆ ಚೆನ್ನಾಗಿ ನಡೆಯುತ್ತಿತ್ತು. ಈಗ ಲಾಕ್​ಡೌನ್​ನಿಂದ ಕುದುರೆಗಳಿಗೆ ಮೇವಿಲ್ಲ. ನಮಗೂ ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.