ETV Bharat / state

ಮೈಸೂರಲ್ಲಿ ಸೈನ್ಸ್ ಸಿಟಿ ನಿರ್ಮಾಣಕ್ಕೆ ಭೂಮಿ ನೀಡಿದ ಸುತ್ತೂರು ಮಠ - ಮೈಸೂರು

ಸೈನ್ಸ್​​ ಸಿಟಿ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ 25 ಎಕರೆ ಭೂಮಿಯನ್ನು ನೀಡಲು ಸುತ್ತೂರು ಮಠ ಮುಂದೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಸುತ್ತೂರಿಗೆ ಖುದ್ದು ಡಿಸಿಎಂ ಪರಮೇಶ್ವರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸುತ್ತೂರು ಮಠ
author img

By

Published : Jun 24, 2019, 5:07 PM IST

ಮೈಸೂರು: ಭಾರತ ಸರ್ಕಾರದ ಸೈನ್ಸ್ ಸಿಟಿ ಯೋಜನೆಗೆ ಸುತ್ತೂರಿನಲ್ಲಿ‌ ಡಿಸಿಎಂ ಪರಮೇಶ್ವರ್ ಸ್ಥಳ ಪರಿಶೀಲನೆ ಮಾಡಿ ಶ್ರೀಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಕೇಂದ್ರ ಸರ್ಕಾರ ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿ ರಾಜ್ಯಕ್ಕೆ ಒಂದೊಂದು ಸೈನ್ಸ್ ಸಿಟಿ ಹಾಗೂ 4 ರಿಂದ 5 ರೀಜನಲ್ ಸೆಂಟರ್ ಮಾಡಲು ಯೋಜನೆಯ ಪ್ರಸ್ತಾವನೆ ಇದ್ದು, ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ 25 ಎಕರೆ ಭೂಮಿಯನ್ನು ನೀಡಲು ಸುತ್ತೂರು ಮಠ ಮುಂದೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಸುತ್ತೂರಿಗೆ ಖುದ್ದು ಡಿಸಿಎಂ ಪರಮೇಶ್ವರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಭೇಟಿ ವೇಳೆ ಡಿಸಿಎಂ ಪರಮೇಶ್ವರ್ ಸುತ್ತೂರು ಶ್ರೀಗಳೊಂದಿಗೆ ಹಾಗೂ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ.

ಸುತ್ತೂರು ಮಠಕ್ಕೆ ಭೇಟಿ ನೀಡಿದ ಡಿಸಿಎಂ ಜಿ.ಪರಮೇಶ್ವರ್

ಸೈನ್ಸ್ ಸಿಟಿಯ ಉದ್ದೇಶವೇನು:

ಮಕ್ಕಳಿಗೆ ವಿಜ್ಞಾನದ ಬಗ್ಗೆ ಅಭಿರುಚಿ ಮೂಡಿಸುವುದು ಹಾಗೂ ಪ್ರತಿಯೊಬ್ಬರ ಜೀವನದಲ್ಲಿ ಈ ತಂತ್ರಜ್ಞಾನವನ್ನು ಹೇಗೆ ಆವರಿಸಿಕೊಂಡಿದೆ ಎಂಬುದನ್ನು ತಿಳಿಸುವ ಗ್ಯಾಲರಿಗಳು, ಜೊತೆಗೆ ಸೈನ್ಸ್​​​ಗೆ ಸಂಬಂಧಿಸಿದ ಶಿಬಿರಗಳನ್ನು ಆಯೋಜನೆ ಮಾಡುವ ಉದ್ದೇಶ ಹೊಂದಲಾಗಿದೆ. ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಸೆಮಿನಾರ್ ಗಳು ನೂತನ ಆವಿಷ್ಕಾರಗಳ ಪ್ರದರ್ಶನವನ್ನು ಏರ್ಪಡಿಸಲು ಈ‌ ಕೇಂದ್ರವನ್ನು ಬಳಸಿಕೊಳ್ಳಲಾಗುವುದು ಇಲ್ಲಿ ಅವಕಾಶವಿದೆ ಎಂದರು.

Intro:ಮೈಸೂರು: ಭಾರತ ಸರ್ಕಾರದ ಸೈನ್ಸ್ ಸಿಟಿ ಯೋಜನೆ ಸುತ್ತೂರಿನಲ್ಲಿ‌ ಡಿಸಿಎಂ ಪರಮೇಶ್ವರ್ ಸ್ಥಳ ಪರಿಶೀಲನೆ ಮಾಡಿ ಶ್ರೀಗಳ ಜೊತೆ ಮಾತುಕತೆ ನಡೆಸಿದರು.

Body:ಕೇಂದ್ರ ಸರ್ಕಾರ ಸುಮಾರು ೨೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿ ರಾಜ್ಯಕ್ಕೆ ಒಂದೊಂದು ಸೈನ್ಸ್ ಸಿಟಿ ಹಾಗೂ ೪ ರಿಂದ ೫ ರೀಜನಲ್ ಸೆಂಟರ್ ಮಾಡಲು ಯೋಜನೆಯ ಪ್ರಸ್ತಾವನೆ ಇದ್ದು, ಈ ಯೋಜನೆಯನ್ನು ಮೈಸೂರಿನ ಸುತ್ತೂರಿನ ಬಳಿ‌ ಯೋಜನೆಗೆ ಬೇಕಾಗಿರುವ ೨೫ ಎಕರೆ ಭೂಮಿಯನ್ನು ನೀಡಲು ಸುತ್ತೂರು ಮಠ ಮುಂದೆ ಬಂದಿದ್ದು ಅದರ ಅಂಗವಾಗಿ ಇಂದು ಸುತ್ತೂರಿಗೆ ಖುದ್ದು ಡಿಸಿಎಂ ಪರಮೇಶ್ವರ್ ಭೇಟಿ ಸೈನ್ಸ್ ಸಿಟಿಯ ಸ್ಥಳ ಪರಿಶೀಲನೆ ನಡೆಸಿದರು.
ನಂತರ ಸುತ್ತೂರು ಶ್ರೀಗಳೊಂದಿಗೆ ಮಾತುಕತೆಯನ್ನು ನಡೆಸಿ, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಡಿಸಿಎಂ ರಾಜ್ಯಕ್ಕೆ ಸುತ್ತೂರಿನ‌ ಈ ಸ್ಥಳದಲ್ಲಿ ಸೈನ್ಸ್ ಸೆಂಟರ್ ತೆರೆಯಲು ರಾಜ್ಯಸರ್ಕಾರ ಉದ್ದೇಶ ಹೊಂದಿದೆ. ಆದ್ದರಿಂದ ಈ ಭಾಗಕ್ಕೆ ಭೂಮಿ ಮಂಜೂರು ಮಾಡಬೇಕೆಂದು ಕಳುಹಿಸುತ್ತೇವೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದರು.

ಸೈನ್ಸ್ ಸಿಟಿಯ ಉದ್ದೇಶವೇನು:- ಈ ಸೈನ್ಸ್ ಸಿಟಿಯ ಉದ್ದೇಶ ಮಕ್ಕಳಿಗೆ ವಿಜ್ಞಾನದ ಬಗ್ಗೆ ಅಭಿರುಚಿ ಮೂಡಿಸುವುದು ಹಾಗೂ ಪ್ರತಿಯೊಬ್ಬರ ಜೀವನದಲ್ಲಿ ಈ ಟೆಕ್ನಾಲಜಿ ಹೇಗೆ ಆವರಿಸಿಕೊಂಡಿದೆ ಎಂಬುದನ್ನು ತಿಳಿಸುವ ಗ್ಯಾಲರಿಗಳು, ಜೊತೆಗೆ ಸೈನ್ಸ್ ಗೆ ಸಂಬಂಧಿಸಿದ ಶಿಬಿರಗಳನ್ನು ಇಲ್ಲಿ ಆಯೋಜನೆ ಮಾಡಲಾಗುತ್ತದೆ.
ಈ ಸೈನ್ಸ್ ಕೇಂದ್ರದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಸೆಮಿನಾರ್ ಗಳು ಹೊಸ ಹೊಸ ಆವಿಷ್ಕಾರಗಳ ಪ್ರದರ್ಶನವನ್ನು ಏರ್ಪಡಿಸಲು ಈ‌ ಕೇಂದ್ರವನ್ನು ಬಳಸಿಕೊಳ್ಳಲಾಗುವುದು ಇಲ್ಲಿ ಅವಕಾಶವಿದೆ ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.