ETV Bharat / state

ಕೊರೊನಾ ಸಂಕಷ್ಟ: ಸುತ್ತೂರು ಮಠಕ್ಕೆ ಭಕ್ತರ ಪ್ರವೇಶ ಬಂದ್

ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ನಂಜನಗೂಡು ತಾಲೂಕಿನಲ್ಲಿರುವ ಸುತ್ತೂರು ಮಠ ಹಾಗೂ ಮಠದ ವ್ಯಾಪ್ತಿಯ ದೇವಾಲಯಗಳಿಗೆ ಇಂದಿನಿಂದ ಭಕ್ತರು ಆಗಮಿಸದಂತೆ ನಿರ್ಬಂಧ ಹೇರಲಾಗಿದೆ.

ಸುತ್ತೂರು ಮಠ
ಸುತ್ತೂರು ಮಠ
author img

By

Published : Jun 24, 2020, 5:36 PM IST

ಮೈಸೂರು: ದಿನದಿಂದ ದಿನಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ನಂಜನಗೂಡು ತಾಲೂಕಿನಲ್ಲಿರುವ ಸುತ್ತೂರು ಮಠ ಹಾಗೂ ಮಠದ ವ್ಯಾಪ್ತಿಯ ದೇವಾಲಯಗಳಿಗೆ ಇಂದಿನಿಂದ ಭಕ್ತರು ಆಗಮಿಸದಂತೆ ನಿರ್ಬಂಧ ಹೇರಲಾಗಿದೆ.

ಕೊರೊನಾ ವೈರಸ್‌ ಸೋಂಕು ವೇಗವಾಗಿ ಹರಡುತ್ತಿರುವ ಕಾರಣ ಭಕ್ತರ ಹಿತದೃಷ್ಟಿಯಿಂದ ಸುತ್ತೂರು ಶ್ರೀಕೇತ್ರದಲ್ಲಿ ಇಂದಿನಿಂದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಯವರ ಕರ್ತೃ ಗದ್ದುಗೆ, ಶ್ರೀಮಠ ಹಾಗೂ ಇತರೆ ದೇವಸ್ಥಾನಗಳಿಗೆ ಪ್ರವೇಶವನ್ನು ಮತ್ತೆ ನಿಲ್ಲಿಸಲಾಗಿದೆ. ಇದಕ್ಕೆ ಭಕ್ತಾದಿಗಳು ಸಹಕರಿಸುವಂತೆ ಕೋರಿ ಸುತ್ತೂರು ಮಠ ಪ್ರಕಟಣೆಯಲ್ಲಿ ತಿಳಿಸಿದೆ.

ಮೈಸೂರಿನಲ್ಲಿ ಮಂಗಳವಾರ 21 ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.