ಮೈಸೂರು: ಸುತ್ತೂರು ಶಾಖಾ ಮಠದಲ್ಲಿ ಶ್ರಾವಣ ಮಾಸದ ಪೂಜೆ ಮತ್ತು ಪ್ರವಚನ ಕಾರ್ಯಕ್ರಮವನ್ನು ಭಕ್ತರು ಆನ್‌ಲೈನ್ ನಲ್ಲೇ ವೀಕ್ಷಣೆ ಮಾಡಬಹುದು.
ಶ್ರಾವಣ ಮಾಸ ಶುರುವಾಗಿದ್ದು, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶಾಖಾ ಮಠದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಆನ್‍ಲೈನ್ ಮೂಲಕ ಪ್ರವಚನ ಹಾಗೂ ಪೂಜಾನುಷ್ಠಾನದ ಕಾರ್ಯಕ್ರಮ ಏರ್ಪಡಿಸಿದ್ದು, ಶ್ರೀ ಗಳ ಸಾನ್ನಿಧ್ಯದಲ್ಲಿ ಡಾ.ಕೆ.ಅನಂತರಾಮು ಅವರು ಇಂದು ವಚನ ಚಿಂತನ ಕುರಿತು ಪ್ರವಚನ ನೀಡಲಿದ್ದಾರೆ.
ಸಂಜೆ 6:30ಕ್ಕೆ ಪ್ರಾರ್ಥನೆ, 6:45ಕ್ಕೆ ಪ್ರವಚನ ಹಾಗೂ 7:25 ಕ್ಕೆ ಮಹಾಮಂಗಳಾರತಿ ಇದ್ದು, ಭಕ್ತರು ಯೂಟ್ಯೂಬ್ ಹಾಗೂ ಫೇಸ್ ಬುಕ್ ಲಿಂಕ್ ಗಳಲ್ಲಿ ಪ್ರವಚನ ಹಾಗೂ ಪೂಜೆಗಳನ್ನು ವೀಕ್ಷಣೆ ಮಾಡಬಹುದಾಗಿದೆ.