ETV Bharat / state

ಕತ್ತು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ ; ಕೊಲೆ ಶಂಕೆ - ಮೈಸೂರಿನ ಕ್ರೈಂ ಸುದ್ದಿಗಳು

ಕೂಡಲೇ ಸ್ಥಳೀಯರು ಇಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಎನ್‌ಆರ್‌ಠಾಣೆ ಪೊಲೀಸರು ಪರಿಶೀಲನೆ‌‌ ನಡೆಸಿದರು. ಕತ್ತು ಬಿಗಿದ ರೀತಿಯಲ್ಲಿ ರವಿಯ ಶವ ಪತ್ತೆಯಾಗಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ತನಿಖೆ ಮುಂದುವರಿಸಿದ್ದಾರೆ..

Suspicious death of a young man in Mysore
ಕತ್ತು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
author img

By

Published : Dec 15, 2020, 6:32 PM IST

ಮೈಸೂರು : ಯುವಕನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಮೈಸೂರಿನ ಕುರಿಮಂಡಿ ಎ ಬ್ಲಾಕ್ ನಿವಾಸಿ ರವಿ (26) ಮೃತ ದುರ್ದೈವಿ. ಕತ್ತು ಬಿಗಿದ ಸ್ಥಿತಿಯಲ್ಲಿ ರವಿಯ ಶವ ಪತ್ತೆಯಾಗಿದ್ದು, ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ನಿಗೂಢವಾಗಿ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ: ಕೊಲೆ ಶಂಕೆ

ರೋಡ್ ರೋಲಾರ್ ಚಾಲಕನಾಗಿದ್ದ ರವಿ ಮನೆಯಲ್ಲಿ ಒಬ್ಬನೆ ವಾಸವಾಗಿದ್ದ. ಸ್ನೇಹಿತರ ಜೊತೆಯಲ್ಲೇ ಸೋಮವಾರ ರಾತ್ರಿ ಪಾರ್ಟಿ ಮಾಡಿದ್ದ ಎನ್ನಲಾಗುತ್ತಿದೆ.

ಆದರೆ, ಎಲ್ಲ ಸ್ನೇಹಿತರು ಎದ್ದು ಹೋಗಿದ್ದರು ಈತ ಮಾತ್ರ ಹೊರಗೆ ಬಂದಿರಲಿಲ್ಲ. ಅನುಮಾನ ವ್ಯಕ್ತಪಡಿಸಿ ಸ್ಥಳೀಯರು ಕಿಟಕಿಯಿಂದ ನೋಡಿದಾಗ ಕತ್ತು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಕತ್ತು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಕೂಡಲೇ ಸ್ಥಳೀಯರು ಇಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಎನ್‌ಆರ್‌ಠಾಣೆ ಪೊಲೀಸರು ಪರಿಶೀಲನೆ‌‌ ನಡೆಸಿದರು. ಕತ್ತು ಬಿಗಿದ ರೀತಿಯಲ್ಲಿ ರವಿಯ ಶವ ಪತ್ತೆಯಾಗಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು‌ ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.