ಮೈಸೂರು: ಹಲ್ಲೆಗೆ ಒಳಗಾಗಿದ್ದ ಶಾಸಕ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದರೂ ಕಿವಿಯಲ್ಲಿ ಸ್ವಲ್ಪ ತೊಂದರೆ ಇದೆ ಎಂದು ವೈದ್ಯರಾದ ಉಪೇಂದ್ರ ಶೆಣೈ ಮತ್ತು ದತ್ತಾತ್ರೇಯ ಶಾಸಕರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ನರ ಕಟ್ ಆದ ಹಿನ್ನೆಲೆ ಕಿವಿಯ ಸಣ್ಣ ತುಂಡಿಗೆ ಹೊಲಿಗೆ ಹಾಕಿದ್ದೆವು, ಆದರೆ ಅದು ಸರಿ ಹೋಗದ ಕಾರಣ ಆಪರೇಷನ್ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಮಾಡಿದ ಜಾಗಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದೇವೆ ಎಂದು ಡಾ. ಉಪೇಂದ್ರ ಶೆಣೈ ಹೇಳಿದರು.