ಮೈಸೂರು: ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಪುನಾರಂಭ ಹಾಗೂ ವಿಸ್ತರಣೆಯ ಭೂಮಿ ಪೂಜೆಗೆ ಆಗಮಿಸಿ ಸಮಾರಂಭಕ್ಕೆ ಚಾಲನೆ ನೀಡುವಂತೆ ಸುತ್ತೂರು ಶ್ರೀಗಳಿಗೆ ಶಾಸಕ ಹಾಗೂ ಉದ್ಯಮಿ ಮುರುಗೇಶ್ ನಿರಾಣಿ ಆಹ್ವಾನಿಸಿದ್ದಾರೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ್ದ ಶಾಸಕ ಮುರುಗೇಶ್ ನಿರಾಣಿ ಸುತ್ತೂರು ಮಠದ ಪೀಠಾಧಿಪತಿ ಡಾ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸಕ್ಕರೆ ಕಾರ್ಖಾನೆ ಪುನಾರಂಭದ ಆಹ್ವಾನ ಪತ್ರಿಕೆ ನೀಡಿದರು.
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಪುನಾರಂಭ ಮಾಡುವುದರಿಂದ ಆ ಭಾಗದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ. ಅಲ್ಲದೇ ಸಂಸ್ಥೆಯ ಬೆಳವಣಿಗೆ ಬಗ್ಗೆ ಶ್ರೀಗಳ ಜೊತೆ ಚರ್ಚಿಸಿದರು.
ಮೈಸೂರು ಅರಮನೆ ರಾಜವಂಶಸ್ಥರನ್ನ ಆಹ್ವಾನಿಸಿದ ಮುರುಗೇಶ್ ನಿರಾಣಿ:
ಈ ಕಾರ್ಯಕ್ರಮಕ್ಕೆ ಮೈಸೂರು ಅರಮನೆ ರಾಜವಂಶಸ್ಥರನ್ನು ಮುರುಗೇಶ್ ನಿರಾಣಿ ಆಹ್ವಾನಿಸಿದ್ದಾರೆ. ಇಂದು ಅರಮನೆಗೆ ಆಗಮಿಸಿದ್ದ ನಿರಾಣಿ, ಆಗಸ್ಟ್ 11 ರಂದು ಈ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ರಾಜ ಯದುವೀರ್ ಹಾಗೂ ತಾವು ಕುಟುಂಬ ಸಮೇತರಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮಹಾರಾಣಿ ಪ್ರಮೋದದೇವಿ ಒಡೆಯರ್ ಅವರಿಗೆ ಆಹ್ವಾನ ಪತ್ರಿಕೆ ನೀಡಿದರು.