ETV Bharat / state

‘ಮಾತು ನಿಲ್ಲಿಸಿ ಉದ್ಯೋಗ ಸೃಷ್ಟಿಸಿ’ ಮೋದಿ ಭಾಷಣ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ - Opposition to Prime Minister Narendra Modi's speech

ಮೈಸೂರು ವಿವಿಯ 100ನೇ ಘಟಿಕೋತ್ಸವ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ದಲಿತ ವಿದ್ಯಾರ್ಥಿ ಒಕ್ಕೂಟದಿಂದ ನಿರುದ್ಯೋಗ ಸಮಸ್ಯೆ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಲಾಯಿತು.

students-protest-over-modi-speech-in-mysuru
ಮೋದಿ ಭಾಷಣ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ
author img

By

Published : Oct 19, 2020, 3:51 PM IST

ಮೈಸೂರು: 'ಇನ್ನಾದರೂ ಮಾತು ನಿಲ್ಲಿಸಿ, ಉದ್ಯೋಗ ಸೃಷ್ಟಿಸಿ ಯುವಜನತೆಗೆ ಉದ್ಯೋಗ ಭದ್ರತೆ ನೀಡಿ' ಎಂದು ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿ ದಲಿತ ವಿದ್ಯಾರ್ಥಿ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು.

ಇಂದು ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಘಟಿಕೋತ್ಸವ ಉದ್ದೇಶಿಸಿ ಆನ್​ಲೈನ್​​​ನಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಲಿತ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು 'ಇನ್ನಾದರೂ ಮಾತು ನಿಲ್ಲಿಸಿ, ಯುವಜನತೆಗೆ ಉದ್ಯೋಗ ಭದ್ರತೆ ನೀಡಿ' ಎಂದು ಸ್ಥಳದಲ್ಲಿ ಪಕೋಡ ಮಾರಿ ಪ್ರತಿಭಟಿಸಿದರು.

ಮೋದಿ ಭಾಷಣ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಈ ಸಂದರ್ಭದಲ್ಲಿ ಪ್ರತಿಭಟನೆ ಕುರಿತು ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಮಹೇಶ್ ಮಾತನಾಡಿ, ಪ್ರಧಾನಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು, ಆದರೆ ಅದು ಸಾಧ್ಯವಾಗಿಲ್ಲ. ಇನ್ನಾದರೂ ಯುವ ಜನರಿಗೆ ಉದ್ಯೋಗ ಭದ್ರತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ಪಕೋಡ ಮಾರಿ, ಸಾಂಕೇತಿಕ ಪ್ರತಿಭಟನೆ ಕೈಗೊಂಡಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.