ETV Bharat / state

ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ನೋ ಆನ್​​ಲೈನ್​​ ಕ್ಲಾಸ್​ ಎಂದ ಶಿಕ್ಷಣ ಸಂಸ್ಥೆ: ಪೋಷಕರ ಆಕ್ರೋಶ - ಸೇಂಟ್ ನೋಬರ್ಟ್ ಶಿಕ್ಷಣ ಸಂಸ್ಥೆ

ಶುಲ್ಕ ಪಾವತಿಸಲ್ಲ ಎಂದ ವಿದ್ಯಾರ್ಥಿಗಳನ್ನು ಆನ್​​ಲೈನ್ ತರಗತಿಗಳಿಂದ ಬ್ಲಾಕ್ ಮಾಡಲಾಗಿದೆ ಎಂದು ಮೈಸೂರಿನ ಸೇಂಟ್ ನೋಬರ್ಟ್ ಶಿಕ್ಷಣ ಸಂಸ್ಥೆ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ.

students parents alligations against school
ಶಾಲೆ ವಿರುದ್ಧ ಪೋಷಕರ ಆರೋಪ
author img

By

Published : Jun 27, 2020, 2:30 PM IST

ಮೈಸೂರು: ಶುಲ್ಕ ಪಾವತಿಸಲ್ಲ ಎಂದ ವಿದ್ಯಾರ್ಥಿಗಳನ್ನು ಆನ್​​ಲೈನ್ ತರಗತಿಗಳಿಂದ ಬ್ಲಾಕ್ ಮಾಡಲಾಗಿದೆ ಎಂಬ ಆರೋಪ ತಿ.ನರಸಿಪುರ ತಾಲೂಕಿನ‌ ಸೇಂಟ್ ನೋಬಟ್೯ ಶಿಕ್ಷಣ ಸಂಸ್ಥೆಯ ವಿರುದ್ಧ ಕೇಳಿ ಬಂದಿದೆ.

ಶಾಲೆ ವಿರುದ್ಧ ಪೋಷಕರ ಆರೋಪ
ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳಿಗೆ ಮಾತ್ರ ಆನ್​​ಲೈನ್ ಕ್ಲಾಸ್ ಪ್ರಾರಂಭ ಮಾಡಿರುವ ಸೇಂಟ್ ನೋಬರ್ಟ್ ಶಿಕ್ಷಣ ಸಂಸ್ಥೆಯು, ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನ ಬ್ಲಾಕ್ ಮಾಡಿದೆ. ಮಕ್ಕಳ ಶಾಲೆಯ ಶುಲ್ಕ ಪಾವತಿಸುವಂತೆ ಪೋಷಕರಿಗೆ ಶಾಲೆ ಆಡಳಿತ ಮಂಡಳಿ ಒತ್ತಾಯ ಮಾಡುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಸರ್ಕಾರದ ಆದೇಶಗಳನ್ನು ಪಾಲಿಸದ ಸೇಂಟ್ ನೋಬರ್ಟ್ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕಿನ ಬಿಇಒ ಬಳಿ ಪೋಷಕರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಪೋಷಕರ ಅಳಲಾಗಿದೆ‌.

ಕೊರೊನಾ ಹಾವಳಿಯಿಂದ ಕಂಗೆಟ್ಟಿರುವುದರಿಂದ ಯಾವುದೇ ಕೆಲಸವಿಲ್ಲದೇ ಪರದಾಡುವಂತಾಗಿದೆ. ಶುಲ್ಕ ಪಾವತಿಸಲು ಅವಕಾಶ ನೀಡುವಂತೆ ಕೇಳಿಕೊಂಡರೂ ಶಾಲೆಯ ಆಡಳಿತ ಮಂಡಳಿ ಕರುಣೆ ತೋರುತ್ತಿಲ್ಲ ಅಂತಿದ್ದಾರೆ ಪೋಷಕರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.