ಮೈಸೂರು: ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಸ್ವಗ್ರಾಮ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದಲ್ಲಿ ಅನಾದಿ ಕಾಲದ ಜೈನ ತೀರ್ಥಂಕರರ ವಿಗ್ರಹಗಳು ಪತ್ತೆಯಾಗಿವೆ.
ಗ್ರಾಮದ ಚನ್ನಕೇಶವ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ನಡೆಸುತ್ತಿದ್ದ ಸಂದರ್ಭದ ಜೈನ ತೀರ್ಥಂಕರರ ವಿಗ್ರಹಗಳು ಪತ್ತೆಯಾಗಿವೆ. ಇವು ಗ್ರಾಮದ ಇತಿಹಾಸ ಸಾರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಓದಿ : ಸುಟ್ಟು ಕರಕಲಾದ ಗ್ರಂಥಾಲಯದ ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ: ಸೈಯದ್ ಇಸಾಕ್ಗೆ 50 ಸಾವಿರ ರೂ. ನೆರವು
ಮೈಸೂರು ರಾಜ ಮನೆತನದ ಪಾಳೇಗಾರರ ಗರಡಿ ಗ್ರಾಮವೆಂದು ಹದಿನಾರು ಗ್ರಾಮ ಪ್ರಸಿದ್ದಿ ಪಡೆದಿತ್ತು. ರಾಜ ಮನೆತನದವರೊಂದಿಗೆ ಈ ಗ್ರಾಮದ ಪಾಳೇಗಾರರು ಬಹಳ ಹತ್ತಿರದ ನಂಟು ಹೊಂದಿದ್ದರು.
ಸದ್ಯ, ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳು ಶಾಸನಗಳು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಇನಷ್ಟು ವಿಗ್ರಹಗಳು ಸಿಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.