ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರುಬರ ಸಂಘದ ಹೋರಾಟ ಕೈಬಿಡಿ ಎಂದು ಹೇಳಿಲ್ಲ. ಹೋರಾಟದ ನೇತೃತ್ವ ವಹಿಸಲು ಬರ್ತೀನಿ ಎಂದಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ನೂತನ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ತಿಳಿಸಿದರು.
ಮೈಸೂರಿನ ದೇವರಾಜ ಅರಸು ರಸ್ತೆಯ ಶಿವಾಯ ಮಠದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಹೋರಾಟದ ಬಗ್ಗೆ ಹೆಚ್.ಎಂ.ರೇವಣ್ಣ ಜೊತೆ ಮಾತನಾಡಿದ್ದೇವೆ. ಇಂದು ಅಥವಾ ನಾಳೆಯೊಳಗೆ ಸಚಿವ ಕೆ.ಎಸ್.ಈಶ್ವರಪ್ಪ ಜೊತೆನೂ ಮಾತಾಡ್ತೀವಿ. ಈ ಹೋರಾಟದಿಂದ ಕುರುಬರು ಇಬ್ಭಾಗ ಆಗುವ ಪ್ರಶ್ನೆಯೇ ಇಲ್ಲ. ಹೋರಾಟದಲ್ಲಿ ಕುರುಬರ ಸಂಘ ಪಾಲ್ಗೊಳ್ಳಲಿದೆ ಎಂದರು.
ಓದಿ : ’’ನನಗೆ ರಾಜಕೀಯ ಅನುಭವ ಇಲ್ಲ ವಿಶ್ವನಾಥನಿಂದ ಹೇಳಿಸಿಕೊಳ್ಳುತ್ತೇನೆ’’: ಸಿದ್ದರಾಮಯ್ಯ
ಸನ್ಮಾನ ಮಾಡಲು ಮುಗಿಬಿದ್ದ ಜನ: ಬಿ.ಸುಬ್ರಹ್ಮಣ್ಯ ಕುರುಬರ ಸಂಘದ ನೂತನ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಹಿನ್ನೆಲೆ ಕುರುಬ ಸಮುದಾಯದವರು ಸನ್ಮಾನ ಮಾಡಲು ಮುಗಿಬಿದ್ದರು.