ಮೈಸೂರು: ನೂತನ ಸಚಿವ ಎಸ್.ಟಿ ಸೋಮಶೇಖರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪತ್ರ ಬರೆದಿದ್ದಾರೆ ಕುತೂಹಲ ಕೆರಳಿಸಿದ್ದಾರೆ.
ಬಿಜೆಪಿ ಪಕ್ಷಕ್ಕೆ ಆಯ್ಕೆಯಾಗಿ ಸಚಿವರಾಗಿರುವ ಎಸ್.ಟಿ. ಸೋಮಶೇಖರ್ ಅವರು ಮೈಸೂರು ಜಿಲ್ಲೆಯ ಪ್ರವಾಸ ಕೈಗೊಂಡಿದ್ದು ಹಾಗೂ ಬಿಜೆಪಿ ಕಚೇರಿಗೂ ಸಹ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ನಾನು ಹೊಸದಾಗಿ ಬಿಜೆಪಿಯ ಸದಸ್ಯನಾಗಿ, ಶಾಸಕನಾಗಿ ಈಗ ಸಚಿವನಾಗಿದ್ದೇನೆ. ನನ್ನೊಳಗೆ ಸಣ್ಣ ಅಳುಕು, ಮುಜುಗರದ ಭಾವನೆ ಇತ್ತು. ಆದರೆ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಗೌರವ ಪ್ರೀತಿಯ ಸ್ವಾಗತಕ್ಕೆ ನನ್ನಲ್ಲಿದ್ದ ಮುಜುಗರದ ಭಾವನೆ ದೂರವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ರಾಜ್ಯದ ಯಾವುದೇ ಜಿಲ್ಲೆಗೂ ಭೇಟಿ ನೀಡಿದರೂ ಅಲ್ಲಿನ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ವಿಚಾರ ವಿನಿಮಯ ಮಾಡುತ್ತೇನೆ, ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಸರ್ಕಾರದ ಯೋಜನೆಯನ್ನು ಜನರಿಗೆ ಮನವರಿಕೆ ಮಾಡುತ್ತೇನೆ ಎಂದು ಅವರ ಭಾವನೆಯನ್ನು ಪತ್ರದ ಮೂಲಕ ನಳಿನ್ ಕುಮಾರ್ ಕಟೀಲ್ ಅವರಿಗೆ ಹೇಳಿದರು.