ETV Bharat / state

ಗಜಪಡೆಗೆ ಪೂಜೆ ಸಲ್ಲಿಸಿದ ಸಚಿವ ಎಸ್​​ಟಿ ಸೋಮಶೇಖರ್ - elephants worship news

ಸೋಮೇಶ್ವರ ದೇವಸ್ಥಾನದ ಸಮೀಪ ಗಜಪಡೆ ಕ್ಯಾಪ್ಟನ್ ಅಭಿಮನ್ಯು, ಕಾವೇರಿ ಹಾಗೂ ವಿಜಯ ಆನೆಗಳಿಗೆ ಸಾಂಪ್ರದಾಯಿಕವಾಗಿ, ಫಲ ತಾಂಬೂಲ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಎಸ್​​ಟಿ ಸೋಮಶೇಖರ್ ಪೂಜೆ ಸಲ್ಲಿಸಿದರು.

ST Somashekhar did worship to elephants
ಗಜಪಡೆಗೆ ಪೂಜೆ ಸಲ್ಲಿಸಿದ ಸಚಿವ ಎಸ್​​ಟಿ ಸೋಮಶೇಖರ್
author img

By

Published : Oct 25, 2020, 1:38 PM IST

Updated : Oct 25, 2020, 1:46 PM IST

ಮೈಸೂರು: ವಿಶ್ವವಿಖ್ಯಾತ ಅರಮನೆಯಲ್ಲಿ ಆಯುಧ ಪೂಜೆ ಪ್ರಯುಕ್ತ ಜಂಬೂಸವಾರಿ ಯಶಸ್ವಿ ರೂವಾರಿಗಳಾದ ಗಜಪಡೆಗೆ ಪೂಜೆ ಸಲ್ಲಿಸಲಾಯಿತು.

ಅರಮನೆ ಕೋಡಿ ಸೋಮೇಶ್ವರ ದೇವಸ್ಥಾನದ ಸಮೀಪ ಗಜಪಡೆ ಕ್ಯಾಪ್ಟನ್ ಅಭಿಮನ್ಯು, ಕಾವೇರಿ ಹಾಗೂ ವಿಜಯ ಆನೆಗಳಿಗೆ ಸಾಂಪ್ರದಾಯಿಕವಾಗಿ, ಫಲ ತಾಂಬೂಲ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಎಸ್​​​ಟಿ ಸೋಮಶೇಖರ್ ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್​​ಟಿ ಸೋಮಶೇಖರ್, ಆರ್​​ಆರ್ ನಗರ ಉಪಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರ ಮಾತನ್ನು ಸಿದ್ದರಾಮಯ್ಯನವರೇ ಕೇಳಲ್ಲ. ಅವರ ಮಾತಿಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಗಜಪಡೆಗೆ ಪೂಜೆ ಸಲ್ಲಿಸಿದ ಸಚಿವ ಎಸ್​​ಟಿ ಸೋಮಶೇಖರ್

ನಾನು, ಮುನ್ನಿರತ್ನ, ಭೈರತಿ ನಿಷ್ಠಾವಂತ ಕಾರ್ಯಕರ್ತರು. ನಾವು ಪಕ್ಷ ತೊರೆಯುವಾಗ ಇವರೆಲ್ಲಾ ಎಲ್ಲಿ ಹೋಗಿದ್ರು. ಆಗ ಎಲ್ಲಾ ವಿಚಾರವನ್ನು ನಾವು ಇವರಿಗೆ ತಿಳಿಸಿರಲಿಲ್ವಾ ಎಂದು ಪ್ರಶ್ನಿಸಿದರು. ಆರ್ ​ಆರ್ ನಗರದಲ್ಲಿ ಕಾಂಗ್ರೆಸ್​​ಗೆ ಕಾರ್ಯಕರ್ತರಿಲ್ಲ. ಎಲ್ಲರೂ ಮುನ್ನಿರತ್ನರ ಹಿಂದೆ ಬಂದಿದ್ದಾರೆ. ಕಾಂಗ್ರೆಸ್ ಹೊರಗಿನಿಂದ ಜನರನ್ನು ಕರೆ ತಂದು ಬಿತ್ತಿ ಪತ್ರ ಹಂಚಿಸುತ್ತಿದ್ದಾರೆ. ಇದನ್ನೇ ನಮ್ಮ ಅಭ್ಯರ್ಥಿ ಭಯದ ವಾತಾವರಣ ಎಂದು ಹೇಳಿರುವುದು‌ ಎಂದರು. ಇನ್ನೂ, ಮುನ್ನಿರತ್ನ ಕಳೆದ 6 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಅಭಿವೃದ್ಧಿ ವಿಚಾರ ಇಟ್ಟುಕೊಂಡೇ ಮತ ಕೇಳುತ್ತಿದ್ದೇವೆ. ಹೀಗಾಗಿ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾ ಮಳೆಗೆ ಬೆಂಗಳೂರು ತತ್ತರ ವಿಚಾರವಾಗಿ ಮಾತನಾಡಿ, ರಾಜಕಾಲುವೆಗಳ ಒತ್ತವರಿ ತೆರವು ಶೇ.60 ರಷ್ಟು ಆಗಿದೆ. ಇನ್ನೂ 40 ರಷ್ಟು ತೆರವು ಮಾಡಲು ಕೋರ್ಟ್ ಕೇಸ್​ಗಳು ಅಡ್ಡಿಯಿವೆ. ಸಿಎಂ ಆದಷ್ಟು ಬೇಗ ಆ ಒತ್ತುವರಿಗಳನ್ನು ತೆರವು ಮಾಡುವುದರ ಬಗ್ಗೆ ಕ್ರಮ ಕೈಗೊಂಡಿದ್ದಾರೆ ಎಂದರು. ಮಳೆಯಿಂದ ತೊಂದರೆಯಾದವರಿಗೆ 25 ಸಾವಿರ ಹಣವನ್ನು ಬಿಡುಗಡೆ ಮಾಡಲಾಗಿದೆ. ನಿನ್ನೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಅದರ ಅನಾಹುತಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಪರಿಹಾರ ಕಾರ್ಯಗಳು ಸಮಾರೋಪಾದಿಯಲ್ಲಿ ನಡೆಯುತ್ತಿವೆ ಎಂದು ತಿಳಿಸಿದರು.

Last Updated : Oct 25, 2020, 1:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.