ETV Bharat / state

ಅಧಿಕಾರಿಗಳ ಸಂಘರ್ಷವನ್ನು ಸಿಎಂ, ಮುಖ್ಯ ಕಾರ್ಯದರ್ಶಿ ಸರಿಪಡಿಸುತ್ತಾರೆ: ಎಸ್.ಟಿ.ಸೋಮಶೇಖರ್ - ಮೈಸೂರು ಅಧಿಕಾರಿಗಳ ಸಂಘರ್ಷ

ಅಧಿಕಾರಿಗಳ ಸಂಘರ್ಷ ನನ್ನ ಮನಸ್ಸಿಗೆ ನೋವನ್ನುಂಟುಮಾಡಿದೆ. ಸಿಎಂ ಮತ್ತು ಮುಖ್ಯ ಕಾರ್ಯದರ್ಶಿಗಳು ಇದನ್ನು ಸರಿಪಡಿಸುತ್ತಾರೆ ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

st somashekahar
ಎಸ್.ಟಿ.ಸೋಮಶೇಖರ್
author img

By

Published : Jun 4, 2021, 12:37 PM IST

Updated : Jun 4, 2021, 12:56 PM IST

ಮೈಸೂರು: ಜಿಲ್ಲೆಯ ಅಧಿಕಾರಿಗಳ ಸಂಘರ್ಷದಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಈ ಗಲಾಟೆ ಎಲ್ಲರ ಗಮನಕ್ಕೆ ಬಂದಿದೆ ಎಂದು ಮೈಸೂರು ಜಿಲ್ಲಾ‌ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾಧ್ಯಮಗಳ ಜೊತೆ ಸಚಿವರು ಮಾತನಾಡಿದರು.

ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡುವಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದು, ಈ ನಡುವೆ ಈ ರೀತಿಯ ಘಟನೆ ನಡೆದಿದೆ. ಈ‌ ವಿಚಾರವನ್ನು ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.

ಇದನ್ನೂ ಓದಿ: ನಮ್ಮ ಫೈಟ್​ ಕೊರೊನಾ ವಿರುದ್ಧ: ರೋಹಿಣಿ ಸಿಂಧೂರಿ

ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಬೇಕು. ಬೇರೆ ವಿಚಾರಕ್ಕೆ ನಾನು ಗಮನ ಕೊಡುವುದಿಲ್ಲ. ಅಧಿಕಾರಿಗಳ ಸಂಘರ್ಷ ಇನ್ನೂ ಎರಡು ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಿ. ಇದು ನನ್ನ ಉಸ್ತುವಾರಿಗೂ ಮೀರಿದೆ ಎಂದರು.

Last Updated : Jun 4, 2021, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.