ETV Bharat / state

ಆದಿವಾಸಿ ಸಮುದಾಯಕ್ಕೆ ಚಿತ್ರನಟಿ ಶ್ರುತಿ ಸಹಾಯ: ಈಟಿವಿ ಭಾರತ್ ಫಲಶ್ರುತಿ - shruti latest news

ಆದಿವಾಸಿ ಬುಡಕಟ್ಟು ಜನರಿಗೆ ಲಾಕ್​ಡೌನ್ ನಿಂದ ಒಂದು ಹೊತ್ತು ಊಟಕ್ಕೂ ಪರದಾಟ ಎಂಬ ಈ ಟಿವಿ ಭಾರತ್ ವರದಿಗೆ ಚಿತ್ರ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಸ್ಪಂದಿಸಿದ್ದು ಇವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

sruti help for tribes community
ಆದಿವಾಸಿ ಸಮುದಾಯಕ್ಕೆ ಚಿತ್ರನಟಿ ಶ್ರುತಿ ಸಹಾಯ
author img

By

Published : Apr 7, 2020, 5:31 PM IST

ಮೈಸೂರು : ಆದಿವಾಸಿ ಬುಡಕಟ್ಟು ಜನರಿಗೆ ಲಾಕ್​ಡೌನ್ ನಿಂದ ಒಂದು ಹೊತ್ತು ಊಟಕ್ಕೂ ಪರದಾಟ ಎಂಬ ಈಟಿವಿ ಭಾರತ್ ವರದಿಗೆ ಚಿತ್ರ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಸ್ಪಂದಿಸಿದ್ದು, ಇವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಕಳೆದ ಏಪ್ರಿಲ್‌ 1 ರಂದು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಆದಿವಾಸಿ ಸಮುದಾಯ ಎಂಬ ವರದಿಯನ್ನು ಈಟಿವಿ ಭಾರತ್ ಪ್ರಸಾರ ಮಾಡಿತ್ತು, ಇದರಲ್ಲಿ ನಂಜನಗೂಡು ತಾಲೂಕಿನ ಕಾಡಂಚಿನ ಬುಡಕಟ್ಟು ಜನರು ವಾಸವಿರುವ ಡೊರಣಕಟ್ಟೆ, ಕೊತ್ತನಹಳ್ಳಿ ಮತ್ತು ಚಿಲಕನಹಳ್ಳಿ ಸೇರಿದಂತೆ 2000 ಕ್ಕೂ ಅಧಿಕ ಬುಡಕಟ್ಟು ಜನರು ಇರುವ ಈ ಗ್ರಾಮಗಳಲ್ಲಿ ಲಾಕ್ ಡೌನ್ ನಿಂದ ಊಟ ಸಿಗದೇ ಪರದಾಡುತ್ತಿದ್ದರು.

ಇದನ್ನು ಗಮನಿಸಿದ ಈಟಿವಿ ಭಾರತ್ ವರದಿ ನೀಡಿತ್ತು. ವರದಿ ಗಮನಿಸಿದ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ತಮ್ಮ ವಾಹನದಲ್ಲಿ ಹೋಗಿ 150 ಕ್ಕೂ ಹೆಚ್ಚು ಕುಟುಂಬಗಳಿಗೆ 5 ಕೆಜಿ ಅಕ್ಕಿ , 5 ಕೆಜಿ ರಾಗಿಹಿಟ್ಟು , 1 ಲೀಟರ್ ಅಡುಗೆ ಎಣ್ಣೆ, 1 ಕೆಜಿ ತೊಗರಿ ಬೇಳೆ, ಹೆಸರುಕಾಳು, ಕಡಲೆಕಾಳು ಸೇರಿದಂತೆ ದಿನನಿತ್ಯಕ್ಕೆ ಬಳಸುವ ಆಹಾರ ಸಾಮಗ್ರಿಗಳ ಕಿಟ್ ಅನ್ನು ತಾಲೂಕು ಅಧಿಕಾರಿಗಳ ಜೊತೆ ಸೇರಿ ವಿತರಿಸಿದರು.

ಇದನ್ನು ಓದಿ : ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಆದಿವಾಸಿ ಸಮುದಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.