ಮೈಸೂರು: ಗಗನಯಾತ್ರಿಗಳಿಗೆ ಅನುಕೂಲವಾಗುವಂತೆ ವಿಶೇಷ ಆಹಾರಗಳನ್ನು ತಯಾರಿಸಲು ಪ್ರಾಯೋಗಿಕವಾಗಿ ಡಿಆರ್ಡಿಒ ಆರಂಭಿಸಿದ್ದು, ಈ ಆಹಾರ ಉತ್ಪನ್ನಗಳು ಯಾವ ರೀತಿ ಇರುತ್ತವೆ? ಯಾವ ರೀತಿ ತಯಾರು ಮಾಡಲಾಗುತ್ತದೆ? ಎಂಬ ಬಗ್ಗೆ ವಿಜ್ಞಾನಿ ಮಧುಕರ್ ವಿವರಿಸಿದ್ದಾರೆ.
ಈ ಬಗ್ಗೆ 'ಈಟಿವಿ ಭಾರತ' ಜೊತೆ ಮಾತನಾಡಿದ ವಿಜ್ಞಾನಿ ಮಧುಕರ್, ಗಗನಯಾನಿ ಮಿಷನ್ ನಲ್ಲಿ 3 ಜನ ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ಕಳುಹಿಸುತ್ತಾರೆ. ಅಂತರಿಕ್ಷದಲ್ಲಿ ಗುರುತ್ವಾಕರ್ಷಣೆ ಶಕ್ತಿಯ ಇಲ್ಲದಿರುವುದರಿಂದ ಭೂಮಿಗೂ ಅಲ್ಲಿಗೂ ತುಂಬಾನೆ ಬದಲಾವಣೆಯಾಗಲಿದೆ. ಭೂಮಿಯಲ್ಲಿ ಗುರುತ್ವಾಕರ್ಷಣೆ ಶಕ್ತಿ ಇರುವುದರಿಂದ ಆಹಾರವನ್ನು ನಿಂತುಕೊಂಡು ತಿನ್ನಬಹುದು.
ಆದರೆ, ಅಂತರಿಕ್ಷದಲ್ಲಿ ಗುರುತ್ವಾಕರ್ಷಣೆ ಶಕ್ತಿ ಇಲ್ಲದಿರುವುದರಿಂದ ಚಪಾತಿ ಕರಿ ಎಲ್ಲಾ ತೇಲುತ್ತಿರುತ್ತದೆ. ಆ ಕಾರಣಕ್ಕಾಗಿ ನಾವು ಕೆಲವು ಆಹಾರವನ್ನು ಶಾರ್ಟ್ ಲಿಸ್ಟ್ ಮಾಡಿದ್ದು, ಪ್ರಯೋಗ ನಡೆಯುತ್ತಿದೆ. ಅದರ ಆಧಾರದ ಗಗನಯಾತ್ರಿಗಳಿಗೆ ಆಹಾರ ಪೂರೈಸುತ್ತೇವೆ ಎಂದು ಮಾಹಿತಿ ನೀಡಿದರು.
ನಮ್ಮ ದೇಶದ ಗಗನಯಾತ್ರಿಗಳು ಅಂತರಿಕ್ಷಕ್ಕೆ ಹೋಗುತ್ತಿರುವುದರಿಂದ ಈ ಎಲ್ಲ ಆಹಾರ ಪದಾರ್ಥಗಳು ಭಾರತೀಯ ಆಹಾರ ಪದ್ಧತಿಗೆ ಅನುಗುಣವಾಗಿ ತಯಾರಿಸಿದ್ದೇವೆ. ಬೇರೆ ಬೇರೆ ರೀತಿಯ ಸಿದ್ಧ ಆಹಾರ ಉತ್ಪನ್ನಗಳನ್ನು ತಯಾರಿಸಿದ್ದೇವೆ. ಈ ಆಹಾರವನ್ನು ಮಿಕ್ಸ್ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಕಡ್ಡಿ ರೋಲ್ಸ್, ಹೆಚ್ಚು ಲಿಕ್ವಿಡ್ ಆಹಾರ ಇರಲಿದೆ. ಯಾವ ರೂಪದಲ್ಲಿ ಆಹಾರವನ್ನು ಗಗನಯಾತ್ರಿಗಳಿಗೆ ತಲುಪಿಸುತ್ತೇವೆ ಎಂಬುದು ಮುಖ್ಯ. ಆದ್ದರಿಂದ ಲಿಕ್ವಿಡ್ ಡೆಲಿವರಿ ಸಿಸ್ಟಮ್ ಅಭಿವೃದ್ಧಿಪಡಿಸಿದ್ದೇವೆ. ಆಹಾರವನ್ನು ಅತ್ಯಂತ ಸುರಕ್ಷಿತವಾಗಿ ಅಂತರಿಕ್ಷದಲ್ಲಿ ಸೇವಿಸಬಹುದಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಅತಿಥಿ ಉಪನ್ಯಾಸಕರು ಗೈರು.. ತರಗತಿ ಬಹಿಷ್ಕರಿಸಿ ಅಘೋಷಿತ ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು
ಆಹಾರದ ಉತ್ಪನ್ನಗಳು ಇನ್ನೂ ಅಭಿವೃದ್ಧಿಯಾಗುತ್ತಲಿದ್ದು, ಅನೇಕ ಉತ್ಪನ್ನಗಳನ್ನು ಪ್ರಯೋಗಕ್ಕೆ ಇಸ್ರೋದವರಿಗೆ ಕಳುಹಿಸಿದ್ದೇವೆ. ಇನ್ನೂ ಶಾರ್ಟ್ ಲಿಸ್ಟ್ ಆಗಿಲ್ಲ. ಸಿದ್ಧತೆ ನಡೆಯುತ್ತಿದೆ. ವರ್ಲ್ಡ್ ಕ್ಲಾಸ್ ಕುಕ್ಕಿಂಗ್ ಲ್ಯಾಬೋರೇಟರಿ ಇದೆ. ಅದರಲ್ಲಿ ಮೈಕ್ರೋ ಅರ್ಗ್ಯಾನಿಸಮ್, ಬ್ಯಾಕ್ಟೀರಿಯಾ ಅದರೊಳಗೆ ಬರದಂತೆ ನಾವು ಆಹಾರ ಸಿದ್ಧಪಡಿಸುತ್ತೇವೆ. ಪ್ರದರ್ಶನದಲ್ಲಿ ಬಾಹ್ಯಕಾಶಕ್ಕೆ ಕಳುಹಿಸುವ ಆಹಾರ ಉತ್ಪನ್ನಗಳನ್ನು ಇಡಲಾಗಿದೆ ಎಂದು ವಿಜ್ಞಾನಿ ಮಧುಕರ್ ವಿವರಿಸಿದರು.
ಬಾಹ್ಯಾಕಾಶ ಆಹಾರಗಳು ಇಂತಿವೆ:
ವೆಜ್ ಪಲಾವ್
ವೆಜ್ ಬಿರಿಯಾನಿ
ಚಿಕನ್ ಬಿರಿಯಾನಿ
ಚಿಕನ್ ಪಲಾವ್
ಚಿಕನ್ ಕುರ್ಮಾ
ದಾಲ್ ಮಖಾನಿ
ಶಾಹಿ ಪನೀರ್
ಸೂಜಿ ಹಲ್ವಾ
ಚಿಕನ್ ಕಟ್ಟಿ ರೋಲ್
ವೆಜ್ ಕಟ್ಟಿ ರೋಲ್
ಮೊಟ್ಟೆ ಕಟ್ಟಿ ರೋಲ್
ಸ್ಟಫ್ಡ್ ಪರೋಟ
ದ್ರವ ರೂಪದ ಆಹಾರ:
ಮಾವಿನ ಮಕರಂದ
ಪೈನ್ ಸೇಬು ರಸ
ಚಹಾ
ಕಾಫಿ
ಕಾಂಬೊ ಆಹಾರ:
ರಾಜ್ಮಾ ಚಾವಲ್
ಸಾಂಬಾರ್ ಚಾವಲ್
ದಾಲ್ ಚಾವಲ್