ETV Bharat / state

ಪ್ರತಿಷ್ಠಿತ ಸಂಸ್ಥೆಗೆ ಇಂಜಿನಿಯರ್ ಆಗಿ ಆಯ್ಕೆಯಾದ ವಿಶೇಷಚೇತನರು - ಐಟಿ ಉದ್ಯೋಗ

ತಮ್ಮಲ್ಲಿರುವ ದೈಹಿಕ ನ್ಯೂನತೆಗಳನ್ನು ಮೆಟ್ಟಿ ನಿಂತು ಬೆಳೆದ ವಿಶೇಷಚೇತನ ವಿದ್ಯಾರ್ಥಿಗಳು ಪ್ರತಿಷ್ಠಿತ ಸಂಸ್ಥೆಗೆ ಕಿರಿಯ ಅಭಿಯಂತರರಾಗಿ ನೇಮಕವಾಗಿದ್ದಾರೆ.

Special abled person
ವಿಶೇಷಚೇತನರು
author img

By

Published : Jun 1, 2023, 9:57 AM IST

ಮೈಸೂರು: ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಇದ್ದರೆ ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂಬುದಕ್ಕೆ ಈ ವಿಶೇಷಚೇತನರು ಹೊಸ ನಿದರ್ಶನ. ಶ್ರವಣದೋಷವುಳ್ಳ 8 ಜನ ವಿಶೇಷಚೇತನರು ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಪ್ರತಿಷ್ಠಿತ ಸಂಸ್ಥೆಯಲ್ಲಿ ಇಂಜಿನಿಯರ್‌ಗಳಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಜೆಎಸ್‌ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‌ನ ಇಸಿ (ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್) ವಿಭಾಗದ ಶ್ರವಣದೋಷವುಳ್ಳ ವಿದ್ಯಾರ್ಥಿಗಳು ಬೆಂಗಳೂರಿನ ಎಂ/ಎಸ್ ರಸ್ಸೆಲ್ ಟೆಕ್‌ಸಿಸ್ (ಏರೋಸ್ಪೇಸ್ ಆ್ಯಂಡ್ ಡಿಫೆನ್ಸ್ ಡಿವಿಷನ್) ಗೆ ಕಿರಿಯ ಅಭಿಯಂತರರಾಗಿ ಆಯ್ಕೆಯಾಗಿದ್ದಾರೆ. ಕಿರಿಯ ಅಭಿಯಂತರರಾಗಿ ಆಯ್ಕೆಯಾಗಿರುವ ಶಶಿಕುಮಾರ್, ಪೂರ್ಣ ಪ್ರಜ್ಞ, ಎ.ಕಾರ್ತಿಕ್, ಕೆ.ಎಸ್.ಗುರುಪ್ರಸಾದ್, ಎಲ್.ಚೇತನ, ಎಂ.ಚೇತನ್ ಮೂರ್ತಿ, ಆರ್.ಭರತ್, ಶೋಯಬ್ ಮಲ್ಲಿಕ್ ಅವರನ್ನು ಪ್ರಾಚಾರ್ಯರಾದ ಬಿ.ಇಳಂಗೋವನ್, ಇಸಿ ವಿಭಾಗದ ಮುಖ್ಯಸ್ಥೆ ಎಂ.ಕೋಮಲ, ಆಂಗ್ಲ ಉಪನ್ಯಾಸಕ ಕೆ.ಕುಶಾಲ್, ಉಪನ್ಯಾಸಕಿ ಎಂ.ಸ್ಮಿತಾ ಅವರು ಅಭಿನಂದಿಸಿದರು.

ಜೆಎಸ್ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಶಾಲೆಯ ಪ್ರಾಂಶುಪಾಲ ಬಿ.ಇಳಂಗೋವನ್ ಮಾತನಾಡಿ, "ಶಿಕ್ಷಣ ಮತ್ತು ಉದ್ಯೋಗಗಳ ಅವಕಾಶಗಳಿಂದ ವಿಶೇಷಚೇತನರು ತಮ್ಮ ಜೀವನವನ್ನು ಒತ್ತಡದ ಮೂಲಕವೇ ನಿರ್ವಹಿಸಬೇಕಾಗಿರುತ್ತದೆ. ಇವರು ಆರೋಗ್ಯ ಮತ್ತು ಸುರಕ್ಷತೆ, ತಾರತಮ್ಯ, ಶಿಕ್ಷಣದಲ್ಲಿ ಒಳಗೊಳ್ಳುವಿಕೆ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ" ಎಂದು ಹೇಳಿದರು.

"ಸರ್ಕಾರದಿಂದ ಅಗತ್ಯವಾದ ಹಲವು ಯೋಜನೆಗಳಿದ್ದರೂ ಸಹ ವಿಶೇಷಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಅವರಿಗೆ ಕೌಶಲ್ಯದ ಜೊತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಬೇಕಿದೆ. ವಿಶೇಷಚೇತನರಿಗೆ ಕೆಲವು ವಿಶೇಷ ಶಾಲೆಗಳು ಪ್ರಾಥಮಿಕ ಹಂತದಿಂದ ಪ್ರೌಢಶಾಲೆಯವರೆಗೆ ಮಾತ್ರ ಇದ್ದು, ಸಾಮಾನ್ಯ ವಿದ್ಯಾರ್ಥಿಗಳ ಜೊತೆಗೆ ಸಾಧನೆಗೈಯಲು ಸಾಧ್ಯವಾಗುವುದಿಲ್ಲ. ಪ್ರೌಢಶಾಲೆಯ ನಂತರದ ಶಿಕ್ಷಣದಲ್ಲಿ ಇವರು ಜೀವನ ಕಟ್ಟಿಕೊಳ್ಳುವ ಹಿನ್ನೆಲೆಯಲ್ಲಿ ಜೆಎಸ್ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಡಿಪ್ಲೋಮಾ ಹಂತದಲ್ಲಿ ತಾಂತ್ರಿಕ ಶಿಕ್ಷಣವನ್ನು ನೀಡುತ್ತಿದೆ" ಎಂದರು.

ಇದನ್ನೂ ಓದಿ: ಒಂದು ಕೈ, ಎರಡೂ ಕಾಲು ಕಳೆದುಕೊಂಡ ಛಲದಂಕ ಮಲ್ಲನಿಗೆ UPSC ಪರೀಕ್ಷೆಯಲ್ಲಿ 917ನೇ ರ‍್ಯಾಂಕ್‌!

"ಸಂಸ್ಥೆಯಲ್ಲಿರುವ ತರಬೇತಿ, ಉದ್ಯೋಗ ಘಟಕದ ಮೂಲಕ ಇವರಿಗೆ ಜೀವನ ಕೌಶಲ, ಇಂಟರ್ನ್‌ಶಿಪ್ ಮತ್ತು ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನದ ಮೂಲಕ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗುತ್ತಿದೆ" ಎಂದು ತಿಳಿಸಿದರು.

ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿದ ವಿಶೇಷ ಚೇತನ: ಸಾಧನೆಗೆ ನ್ಯೂನತೆಗಳು ಬರೀ ನೆಪ ಎನ್ನುವುದಕ್ಕೆ ಇನ್ನೊಂದು ನಿದರ್ಶನವಿದು. ಅಪಘಾತದಲ್ಲಿ ತಮ್ಮ ಎರಡೂ ಕಾಲುಗಳು ಮತ್ತು ಒಂದು ಕೈ ಕಳೆದುಕೊಂಡಿದ್ದರೂ ಸಹ ಛಲಬಿಡದೆ ಪರಿಶ್ರಮ ಪಟ್ಟು ಓದಿದ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕಸ್ವಾ ಕುರವ್ಲಿ ಎಂಬ ಪ್ರದೇಶದ ನಿವಾಸಿ ಸೂರಜ್ ತಿವಾರಿ 2022ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇತ್ತೀಚೆಗೆ ಪ್ರಕಟವಾದ ಫಲಿತಾಂಶದಲ್ಲಿ 917 ಸ್ಥಾನ ಗಿಟ್ಟಿಸಿಕೊಂಡು ಸಾಧನೆ ಮಾಡಿದ್ದಾರೆ.

ಹಾಗೆಯೇ ಕೇರಳದ ತಿರುವನಂತಪುರಂ ನಿವಾಸಿ ಅಖಿಲಾ ಬಿ.ಎಸ್​​ ಎಂಬವರು ಇದೇ ಪರೀಕ್ಷೆಯಲ್ಲಿ 760 ನೇ ಸ್ಥಾನ ಪಡೆದುಕೊಂಡಿದ್ದಾರೆ. ಐದನೇ ವಯಸ್ಸಿನಲ್ಲಿ ಬಸ್​​​ ಅಪಘಾತದಲ್ಲಿ ಬಲಗೈ ಕಳೆದುಕೊಂಡಿದ್ದ ಯುವತಿ ಇದೀಗ ಕಠಿಣ ಪ್ರರಿಶ್ರಮದಿಂದ ಕಠಿಣ ಪರೀಕ್ಷೆ ಪಾಸ್ ಮಾಡಿ ಇತರರಿಗೆ ಪ್ರೇರಣೆಯಾಗಿದ್ದಾರೆ.

ಇದನ್ನೂ ಓದಿ: ಅಪಘಾತದಲ್ಲಿ ಬಲಗೈ ಕಳೆದುಕೊಂಡಿದ್ದ ಯುವತಿ.. UPSC ಪರೀಕ್ಷೆಯಲ್ಲಿ 760ನೇ ರ‍್ಯಾಂಕ್‌ ಪಡೆದ ಛಲಗಾತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.