ಮೈಸೂರು: ಮಗನನ್ನು ಕೊಲೆಗೈದ ಒಂದು ವಾರದಲ್ಲಿಯೇ ತಂದೆಯನ್ನ ಹಾಡಹಗಲೇ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿರುವ ಘಟನೆ ನಡೆದಿದೆ.
ಕುಟುಂಬದ ಆಸ್ತಿ ವಿಚಾರವಾಗಿ ಮಂಡಕಳ್ಳಿ ಗ್ರಾಮದ ಬಳಿ ಗಲಾಟೆ ನಡೆದಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ದುಷ್ಕರ್ಮಿಗಳು ಮಂಡಕಳ್ಳಿ ಗ್ರಾಮದ ಮರಿಕೋಟೆಗೌಡ ಪುತ್ರ ಸತೀಶ್ ಕುಮಾರ್ನನ್ನು 2020 ಡಿಸೆಂಬರ್ 26 ರಂದು ರಾತ್ರಿ ಎಪಿಎಂಸಿ ರಸ್ತೆ ಬಳಿ ಹತ್ಯೆ ಮಾಡಿದ್ದಾರೆ.
ಮೃತ ಸತೀಶ್ನ ತಂದೆ ಮರಿಕೋಟೆ ಗೌಡರನ್ನು ಜ. 2ರಂದು ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿ ಮರ್ಡರ್ ಮಾಡಲಾಗಿತ್ತು. ಮರಿಕೋಟೆ ಗೌಡರ ಪತ್ನಿ ಈಗಾಗಲೇ ನಿಧನರಾಗಿದ್ದು, ಓರ್ವ ಪುತ್ರ ಮತ್ತು ಪುತ್ರಿ ಇದ್ದರು. ಈ ಸಂಬಂಧ ಮೈಸೂರು ದಕ್ಷಿಣ ಪೊಲೀಸರು ತನಿಖೆ ಆರಂಭಿಸಿದ್ದರು. ಮೇಲ್ನೋಟಕ್ಕೆ ಗೌಡರ ಕೊಲೆಗೆ ಆಸ್ತಿ ವಿಚಾರ ಕಾರಣವಾಗಿರಬಹುದು ಎನ್ನಲಾಗಿದ್ದರೂ ನಿಖರ ಕಾರಣ ತಿಳಿದು ಬಂದಿರಲಿಲ್ಲ.
ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಹಾಗೂ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಸಾಯುತ್ತಿರುವೆ' ಎಂದು ತಾಯಿಗೆ ಕರೆ ಮಾಡಿ ಯುವಕ ಆತ್ಮಹತ್ಯೆ