ETV Bharat / state

ಮೈಸೂರಿನಲ್ಲಿ ಹೆತ್ತ ತಾಯಿಯನ್ನೇ ಜೀಪಿನಿಂದ ಡಿಕ್ಕಿ ಹೊಡೆಸಿ ಕೊಂದ ಮಗ - ಮೈಸೂರಿನಲ್ಲಿ ಮಗನಿಂದಲೇ ತಾಯಿಯ ಕೊಲೆ

ಹಣಕಾಸಿನ ವಿಚಾರಕ್ಕೆ ಜಗಳ ನಡೆದು ಅಮ್ಮನನ್ನೇ ಮಗ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

son-killed-his-mother-in-mysuru
ಮೈಸೂರಿನಲ್ಲಿ ಹೆತ್ತ ತಾಯಿಯನ್ನೇ ಜೀಪಿನಿಂದ ಡಿಕ್ಕಿ ಹೊಡೆಸಿ ಕೊಂದ ಮಗ
author img

By

Published : Feb 17, 2022, 5:46 PM IST

ಮೈಸೂರು: ಹಣಕಾಸಿನ ವಿಚಾರಕ್ಕೆ ನಿತ್ಯ ತಾಯಿ‌ - ಮಗನ ನಡುವೆ ನಡೆಯುತ್ತಿದ್ದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ರಸ್ತೆಯಲ್ಲಿ ಹೋಗುತ್ತಿರುವಾಗ ಜೀಪ್​ನಿಂದ ಡಿಕ್ಕಿ ಹೊಡೆಸಿ ಅಮ್ಮನನ್ನೇ ಮಗ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹನುಮಂತಪುರದಲ್ಲಿ ಇಂದು ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಹನುಮಂತಪುರದ ನಾಗಮ್ಮ (65) ಹತ್ಯೆಗೊಳಗಾದ ಮಹಿಳೆ. ಇವರ ಮಗ ಹೇಮರಾಜ್(45) ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.

ಇದನ್ಣೂ ಓದಿ: ಇವರಾ ಬಂಧುಗಳು.. ತೆಲಂಗಾಣದಲ್ಲಿ ಮೊಮ್ಮಕ್ಕಳನ್ನು ಅಪಹರಿಸಿದ ಅಜ್ಜಿ.. 30 ಲಕ್ಷಕ್ಕೆ ಬೇಡಿಕೆ!!

ತಾಯಿ ಹಾಗೂ ಮಗನ ನಡುವೆ ನಿತ್ಯ ಹಣಕಾಸಿನ ವಿಚಾರಕ್ಕೆ ಜಗಳವಾಗುತ್ತಿತ್ತು. ಈ ಜಗಳ ವಿಕೋಪಕ್ಕೆ ತಿರುಗಿದ್ದು, ನಾಗಮ್ಮ ರಸ್ತೆ ಬದಿಯಲ್ಲಿ ಹೋಗುತ್ತಿರುವಾಗ, ಅದೇ ಸಮಯದಲ್ಲಿ ಹೇಮರಾಜ್ ಜೀಪಿನಿಂದ ಡಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಭೇಟಿ ನೀಡಿ ಆರೋಪಿ ಹೇಮರಾಜ್​ನನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಬೆಟ್ಟದಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.