ETV Bharat / state

ಮೈಸೂರಿನಲ್ಲಿ ಲೈಟರ್ ವಿಚಾರಕ್ಕೆ ಗಲಾಟೆ: ಮಹಿಳೆ ಜುಟ್ಟು ಹಿಡಿದು ಎಳೆದಾಡಿದ ಪುಂಡರು - ಮೈಸೂರು ಅಪರಾಧ ಸುದ್ದಿ

ಲೈಟರ್ ವಿಚಾರಕ್ಕೆ ಗಲಾಟೆ ನಡೆದಿದ್ದು, ಈ ವೇಳೆ ಕೆಲ ಪುಂಡರು ಮಹಿಳೆ ಜುಟ್ಟು ಹಿಡಿದು ಹೈಡ್ರಾಮಾ ನಡೆಸಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ಕಂಡು ಬಂದಿದೆ.

fight with woman over lighter issue in Mysore, Mysore crime news, Lighter news, ಮೈಸೂರಿನಲ್ಲಿ ಲೈಟರ್ ವಿಚಾರಕ್ಕೆ ಮಹಿಳೆಯೊಂದಿಗೆ ಜಗಳ, ಮೈಸೂರು ಅಪರಾಧ ಸುದ್ದಿ, ಲೈಟರ್ಸ್ ಸುದ್ದಿ,
ಮೈಸೂರಿನಲ್ಲಿ ಲೈಟರ್ ವಿಚಾರಕ್ಕೆ ಗಲಾಟೆ
author img

By

Published : Jun 14, 2022, 2:29 PM IST

ಮೈಸೂರು: ಮಹಿಳೆಯ ಜುಟ್ಟು ಹಿಡಿದು ಎಳೆದಾಡಿದ ಪುಂಡರು, ಅವರ ಪತಿಯ ಬಟ್ಟೆ ಬಚ್ಚಿ ಹೊಡೆದಿರುವ ಘಟನೆ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಮೇಶ್ ಮತ್ತು ಶೋಭಾ ಹಲ್ಲೆಗೊಳಗಾದ ದಂಪತಿ.

ಮೈಸೂರಿನಲ್ಲಿ ಲೈಟರ್ ವಿಚಾರಕ್ಕೆ ಗಲಾಟೆ

ತಿ.ನರಸೀಪುರ ಪಟ್ಟಣದಲ್ಲಿ ರಮೇಶ್ ದಂಪತಿ ಟೀ ಹಾಗೂ ಜ್ಯೂಸ್ ಅಂಗಡಿ ನಡೆಸುತ್ತಿದ್ದಾರೆ. ಎರಡು ದಿನದ ಹಿಂದೆ ರಾತ್ರಿ ಲೈಟರ್ ತೆಗೆದುಕೊಳ್ಳಲು ಇಬ್ಬರು ಯುವಕರು ಬಂದಿದ್ದರು. ಈ ವೇಳೆ, ಲೈಟರ್​ ಬೆಲೆ 20 ರೂ. ಎಂದಿದ್ದಾರೆ. ಲೈಟರ್​ಗೆ 20 ರೂಪಾಯಿ ಏಕೆ ಅಂತಾ ಗಲಾಟೆ ಮಾಡಿದ್ದಾರೆ. ನಿಮ್ಮ ಅಂಗಡಿಯಲ್ಲಿ ಲೈಟರ್ ರೇಟ್ ಜಾಸ್ತಿ ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.

ಓದಿ: ಕೊಪ್ಪಳ: ಮಾರಾಮಾರಿಗೆ ಕಾರಣವಾದ ಯುವಕ-ಯುವತಿಯ ಪ್ರೇಮ ಪ್ರಕರಣ

ನಿಮಗೆ ಬೇಕಾದರೆ ತೆಗೆದುಕೊಳ್ಳಿ ಇಲ್ಲ, ಬೇರೆ ಅಂಗಡಿಗೆ ಹೋಗಿ ಎಂದು ಅಂಗಡಿ ಮಾಲೀಕ ರಮೇಶ್​ ಗ್ರಾಹಕರಿಗೆ ಹೇಳಿದ್ದಾರೆ. ಇದರಿಂದ ಆಕ್ರೊಶಗೊಂಡ ಯುವಕರು ರಮೇಶ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ‌. ಈ ವೇಳೆ, ಯುವಕರಿಗೆ ಪತ್ನಿ ಶೋಭಾ ಹೊಡೆದು ಓಡಿಸಿದ್ದಾರೆ.

ಕಬ್ಬಿಣದ ರಾಡ್ ಹಿಡಿದು ಬೆಳಗ್ಗೆ ಮತ್ತೆ ಐವರು ಯುವಕರು ರಮೇಶ್​ ಅಂಗಡಿಗೆ ಬಂದಿದ್ದಾರೆ. ಅಂಗಡಿಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕಿ, ಏಕಾಏಕಿ ರಮೇಶ್​ರನ್ನು ಅಂಗಡಿಯಿಂದ ಹೊರಗೆ ಎತ್ತುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ರಮೇಶ್ ಹಾಗೂ ಶೋಭಾ ತಲೆಗೆ ಗಾಯವಾಗಿದ್ದು, ಯುವಕರ ಗುಂಪಿನ ವಿರುದ್ಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದಂಪತಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ಪರಿಶೀಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.